ಸಿದ್ದರಾಮಯ್ಯ ಯಾವುದೇ ದೂರು ನೀಡಿಲ್ಲ: ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನಿರಾಧಾರ- ಸಚಿವ ಜಿ.ಟಿ ದೇವೇಗೌಡ ಸ್ಪಷ್ಟನೆ…

0
317

ಮೈಸೂರು,ಜೂ,20,2019(www.justkannada.in): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ  ವೇಳೆ ಸಿದ್ದರಾಮಯ್ಯ ಯಾವುದೇ ದೂರು ನೀಡಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನಿರಾಧಾರ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಸ್ಪಷ್ಟನೆ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಜಿ.ಟಿ ದೇವೇಗೌಡ,  ರಾಹುಲ್ ಗಾಂಧಿ ಭೇಟಿ ವೇಳೆ ಸಿದ್ದರಾಮಯ್ಯ ಯಾವುದೇ ದೂರು ಕೊಟ್ಟಿಲ್ಲ. ಸೋಲಿನ ವರದಿ ಕೊಡುವುದಕ್ಕೆ ಭೇಟಿ ಕೊಟ್ಟಿದ್ದಾರೆ. ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ ಆಗಲೀ ದೂರು ಕೊಟ್ಟಿರುವ ವಿಚಾರ ಸುಳ್ಳು. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನಿರಾಧಾರ. ಎಲ್ಲರು ಅನ್ಯೂನ್ಯವಾಗಿದ್ದಾರೆ. ಕಾಂಗ್ರೆಸ್ ವಿರುದ್ದ ಐಕಮಾಂಡ್ ಗೆ ಯಾವುದೇ ದೂರು ನೀಡಿಲ್ಲ ಎಂದು ಹೇಳಿದರು.

ಸರ್ಕಾರ ನಡೆಸೋದಕ್ಕೆ ಅವಕಾಶ ಕೊಡಿ.. ಎಲ್ಲಾ ರೀತಿ ತೊಡಕುಗಳನ್ನ ನಿವಾರಿಸೋಕೆ ಸಹಕಾರ ಕೊಡಿ ಅಂತ ಮಲ್ಲಿಕಾರ್ಜುನ ಕರ್ಗೆ ಜೊತೆ ಮಾತಾಡಿದ್ದೇವೆ. ಗ್ರಾಮ ವಾಸ್ತವ್ಯ ವಿಚಾರಕ್ಕೆ ಕುರಿತು ಮಾತನಾಡಲೂ ಹೊರಟಿದ್ರು ಅಷ್ಟೇ ಇನ್ನೇನು ರಾಜಕೀಯ ವಿಚಾರ ಮಾತಾಡಿಲ್ಲ. ಕಾಂಗ್ರೆಸ್ ಗೆ ಅಭದ್ರತೆ ಸೃಷ್ಟಿಸುವ ಅವಶ್ಯಕತೆ ಇಲ್ಲ. ಪ್ರೀತಿ ವಿಶ್ವಾಸದಿಂದ ಇರೋದು ನಮ್ಮ ಮುಂದಿನ ಗುರಿ ಎಂದರು.

ಐಎಂಎ ವಿಚಾರದಲ್ಲಿ ಮೈಸೂರಿನಲ್ಲಿ  1600ಕ್ಕೂ ಹೆಚ್ಚು ದೂರುಗಳು ಸ್ವೀಕರ ವಾಗಿದೆ. ಈ ವಿಚಾರದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ‌. ಅದೇ ರೀತಿ ಕ್ರಮ ಕೈಗೊಳ್ಳಲಾಗುತ್ತೆ ಎಂದು ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ  ಜಿ.ಟಿ ದೇವೇಗೌಡ ಹೇಳಿದರು.

Key words: siddaramaiah- Nocomplaints –highcommend-  Minister GT Deve Gowda- clarified.