Sunday, September 20, 2026

BDA Apartments

ನಮ್ಮದು ಸಿದ್ದರಾಮಯ್ಯರ ರೀತಿ ಏಕಚಕ್ರಾಧಿಪತ್ಯವಲ್ಲ: ನಮ್ಮಲ್ಲಿ ಹಿರಿಯರಿದ್ದ...
Home Front Page ನಮ್ಮದು ಸಿದ್ದರಾಮಯ್ಯರ ರೀತಿ ಏಕಚಕ್ರಾಧಿಪತ್ಯವಲ್ಲ: ನಮ್ಮಲ್ಲಿ ಹಿರಿಯರಿದ್ದಾರೆ-ಶಾಸಕ ಕೆ.ಜಿ ಬೋಪಯ್ಯ.

ನಮ್ಮದು ಸಿದ್ದರಾಮಯ್ಯರ ರೀತಿ ಏಕಚಕ್ರಾಧಿಪತ್ಯವಲ್ಲ: ನಮ್ಮಲ್ಲಿ ಹಿರಿಯರಿದ್ದಾರೆ-ಶಾಸಕ ಕೆ.ಜಿ ಬೋಪಯ್ಯ.

ಕೊಡಗು,ಆಗಸ್ಟ್,23,2022(www.justkannada.in): ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಖಂಡಿಸಿ ಆಗಸ್ಟ್ 26 ರಂದು ಕಾಂಗ್ರೆಸ್ ಮಡಿಕೇರಿ ಚಲೋಗೆ ಕರೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಜನಜಾಗೃತಿ ಸಮಾವೇಶ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಆಗಸ್ಟ್ 24 ರಿಂದ 27 ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಕೊಡಗು ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿರುವ ಶಾಸಕ ಕೆ.ಜಿ ಬೋಪಯ್ಯ,  ನಿಷೇಧಾಜ್ಞೆಯನ್ನ ಎಲ್ಲರೂ ಪಾಲಿಸಬೇಕಾಗುತ್ತೆ. ನಾವು ಸರ್ಕಾರದ ಭಾಗವಾಗಿರುವುದರಿಂದ ಇದಕ್ಕೆ ಮನ್ನಣೆ ನೀಡುತ್ತೇವೆ. ಆದರೆ ನಮ್ಮ ಜನಜಾಗೃತಿ ಕೆಲಸ ಮುಂದುರೆಯಲಿದೆ. ನಾವು 5 ತಂಡಗಳಾಗಿ ಜಿಲ್ಲೆಯ  ಉದ್ಧಗಲಕ್ಕೂ ಸಂಚರಿಸುತ್ತೇವೆ. ಕರ ಪತ್ರ ಹಂಚಿ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ.ನಮ್ಮದು ಸಿದ್ದರಾಮಯ್ಯರ ರೀತಿ ಏಕಚಕ್ರಾಧಿಪತ್ಯವಲ್ಲ kg bopaiah

ನಮ್ಮದು ಸಿದ್ದರಾಮಯ್ಯರ ರೀತಿ  ಏಕಚಕ್ರಾದಿಪತ್ಯವಲ್ಲ. ನಮಗೆ ಪಕ್ಷದಲ್ಲಿ ಹಿರಿಯರಿದ್ದಾರೆ. ಮುಂದಿನ ನಡೆ ಬಗ್ಗೆ ನಾವು ನಾಯಕರ ಜತೆ ಚರ್ಚೆ ಮಾಡುತ್ತೇವೆ . ಎಂದರು.

Key words: Siddaramaiah-like -monocracy:—ruler-MLA- KG Bopaiah.