ಸಿದ್ಧರಾಮಯ್ಯ ಮಾತು ಕೇಳಿ ಕೆಂಪಣ್ಣ ಆರೋಪ: ಈವರೆಗೆ ದಾಖಲೆ ನೀಡಿಲ್ಲ- ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ಆಗಸ್ಟ್,25,2022(www.justkannada.in): ವಿಪಕ್ಷ ನಾಯಕ ಸಿದ್ಧರಾಮಯ್ಯ ಮನೆಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಭೇಟಿ ನೀಡಿ ನಂತರ ಸರ್ಕಾರದ ವಿರುದ್ಧ 40 ಪರ್ಸೆಂಟ ಆರೋಪ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಿದ್ಧರಾಮಯ್ಯ  ಮಾತು ಕೇಳಿ ಕೆಂಪಣ್ಣ ಆರೋಪ ಮಾಡುತ್ತಿದ್ದಾರೆ.  ಸಿದ‍್ಧರಾಮಯ್ಯ ಮನೆಗೆ ಹೋಗಬೇಡಿ ಎನ್ನಲ್ಲ. ನೀವು ಮಾಡಿರುವ ಆರೋಪಕ್ಕೆ  ಕೊನೇ ಪಕ್ಷ ಸಿದ್ಧರಾಮಯ್ಯಗಾದರೂ ದಾಖಲೆ ಕೊಡಿ. ಅವರೇ ದಾಖಲೆ ರಿಲೀಸ್ ಮಾಡಲಿ ಎಂದರು.

ಸಿದ್ಧರಾಮಯ್ಯ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ. ಭ್ರಷ್ಟಾಚಾರ ಮುಚ್ಚಿಹಾಕಲು ಈ ರೀತಿ ಹೇಳಿದ್ದಾರೆ.  ಮೊದಲಿಂದಲೂ ಆರೋಪ ಮಾಡಿದ್ದಾರೆ. ಆದರೆ ಈವರೆಗೆ ದಾಖಲೆ ನೀಡಿಲ್ಲ. ದಾಖಲೆ ನೀಡಿದ್ರೆ ಕ್ರಮ ಕೈಗೊಳ್ಳಬಹುದು ಎಂದರು.

Key words: Siddaramaiah-Kempanna- alleges-No record -KS Eshwarappa.