ಸಿದ್ಧರಾಮಯ್ಯ, ಡಿಕೆಶಿ ಅಪ್ಪುಗೆ ಬಗ್ಗೆ ಸಚಿವ ಸುನೀಲ್ ಕುಮಾರ್ ವ್ಯಂಗ್ಯ.

ಉಡುಪಿ,ಆಗಸ್ಟ್,6,2022(www.justkannada.in):  ಸಿದ್ಧರಾಮೋತ್ಸವ ಕಾರ್ಯಕ್ರಮದ ವೇಳೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಪ್ಪುಗೆ ಬಗ್ಗೆ ಇಂಧನ ಸಚಿವ ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸುನೀಲ್ ಕುಮಾರ್, ಸಿದ್ಧರಾಮಯ್ಯ ಡಿಕೆ ಶಿವಕುಮಾರ್ ಅಪ್ಪುಗೆ ಸಹಜವಾದುದಲ್ಲ. ಈಗಾಗಲೇ ಅಪ್ಪುಗೆ ಬಗ್ಗೆ ಬಹಿರಂಗವಾಗಿದೆ. ಯಾರದ್ದೋ ಬಲವಂತಕ್ಕೆ ಅಪ್ಪಿಕೊಂಡಿದ್ದಾರೆ ಅಷ್ಟೆ, ಇವರ ಅಪ್ಪುಗೆ ತುಂಬಾ ದಿನ ಉಳಿಯಲ್ಲ. ಬಲವಂತದ ಅಪ್ಪುಗೆಗೆ ವಿಚ್ಛೇದನವಾಗುತ್ತದೆ ಎಂದು ಲೇವಡಿ ಮಾಡಿದರು.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಚಿವ ಸುನೀಲ್ ಕುಮಾರ್, ಹತ್ಯೆ ಮಾಡಿದವರು ಕೇರಳದವರಲ್ಲ. ಪೊಲೀಸ್ ಇಲಾಖೆಗೆ ಮುಕ್ತ ಅವಕಾಶ ನೀಡಲಾಗಿದೆ. ಪ್ರಕರಣ ಸಂಬಂಧ ನಾಲ್ಕು ಆರೋಪಿಗಳ ಬಂಧನವಾಗಿದೆ. ಪ್ರಮುಖ ಆರೋಪಿ ಬಂಧಿಸಬೇಕು ಎಂದರು.

Key words: Siddaramaiah – DK shivakumar- hug-Minister- Sunil Kumar