Saturday, August 1, 2026

BDA Apartments

Home Front Page ಮುಂದೆಯೂ  ಸಿಎಂ ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಲಿ-ಶಾಸಕ ಅನಿಲ್ ಚಿಕ್ಕಮಾದು

ಮುಂದೆಯೂ  ಸಿಎಂ ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಲಿ-ಶಾಸಕ ಅನಿಲ್ ಚಿಕ್ಕಮಾದು

ಮೈಸೂರು,ನವೆಂಬರ್,12, 2024 (www.justkannada.in):  ಮುಂದಿನ ಚುನಾವಣೆ ಕೂಡ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿ. ಮುಂದೆಯೂ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಬೇಕು ಎಂದು ಹೆಚ್.ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು ಆಗ್ರಹಿಸಿದರು.

ನಾಯಕ ಸಮುದಾಯದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ  ಅಭಿನಂದನೆ ಸಲ್ಲಿಸಲಾಯಿತು. ಬೆಳ್ಳಿ ಖಡ್ಗ ನೀಡಿ, ಬಾದಾಮಿ ಹಾರ ಹಾಕಿ ಮುಖಂಡರು ಅಭಿನಂದಿಸಿದರು.

ಬಳಿಕ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, 24 ಕ್ಯಾರೆಟ್ ಗೋಲ್ಡ್ ಗಿಂತ ಹೆಚ್ಚು ಸಿಎಂ ಸಿದ್ದರಾಮಯ್ಯ. ಮುಂದೆಯೂ ನೀವೇ ಸಿಎಂ ಆಗಬೇಕು. ನಾನು ಹನುಮಂತನ ರೀತಿ ನಿಮ್ಮ ಜೊತೆ ನಿಂತು ಕೆಲಸ ಮಾಡುತ್ತೇನೆ. ರಾಮಾಯಣದ ಹನುಮಂತನ ರೀತಿ ನಾನು ನಿಮ್ಮ ಜೊತೆ ಆಗುತ್ತನೆ. ಮುಂದೆ ಕ್ಷೇತ್ರ ಜನರಲ್ ಆಗುತ್ತೆ, ಬೇರೆ ಕಡೆ ಹೊಗ್ತಾರೆ ಅಂತಿದ್ದಾರೆ. ನಾನು ಈ ಕ್ಷೇತ್ರ  ಬಿಟ್ಟು ಎಲ್ಲಿಯೂ ಹೋಗಲ್ಲ. ಎಂದೆದಿಗೂ ನಿಮ್ಮ ಸೇವೆ ಮಾಡುತ್ತೇನೆ ‌ ಎಂದರು.

450 ಕೋಟಿ ಕೊಟ್ಟಿರೋದು ನಮ್ಮ ತಾಲೂಕಿಗೆ ಹೆಮ್ಮೆಯ ವಿಚಾರ. ಹೆಚ್ ಡಿ ಕೋಟೆಗೆ ಅತಿ ಹೆಚ್ಚು ಅನುದಾನ ಕೊಟ್ಟಿರುವ ಸಿಎಂ ಯಾರಾದ್ರೂ ಇದ್ರೆ ಅದು ಸಿಎಂ ಸಿದ್ದರಾಮಯ್ಯ ಸಾಹೆಬರು ಎಂದು ಅನಿಲ್ ಚಿಕ್ಕಮಾದು‌ ಹೇಳಿದರು.

ಅಯೋಧ್ಯೆ ರಾಮಮಂದಿರ ನಿರ್ಮಾಣ ಆಗೋಕೆ ವಾಲ್ಮೀಕಿ ಮಹರ್ಷಿಗಳು ಕಾರಣ. ವಾಲ್ಮೀಕಿ ಮಹರ್ಷಿ ಇಲ್ಲದಿದ್ದರೆ ರಾಮ ಮಂದಿರ ಇರುತ್ತಿರಲಿಲ್ಲ. ಜೈ ಶ್ರೀರಾಮ್ ಅಂತಾ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಕೊಟ್ಟ ಮಾತು, ಇಟ್ಟ ಗುರಿ ಎಂದೂ ತಪ್ಪಿಲ್ಲ‌ ನಮ್ಮ ಸಮುದಾಯ‌. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮು಼ದಾಯಕ್ಕೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ವಿಧಾನಸೌಧದ ಮುಂಭಾಗ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ನಿರ್ಮಾಣ ಮಾಡಿದರು. ಹಲವು ಸಿಎಂಗಳು ಬಂದು ಹೋದರೂ  ಆಗಿರಲಿಲ್ಲ. ಪರಿವಾರ, ತಳವಾರ ಎಸ್ಟಿಗೆ ಸೇರಿಸೋದಕ್ಕೆ ಕಾರಣ ಸಿದ್ದರಾಮಯ್ಯ ಎಂದರು.

ವಾಲ್ಮೀಕಿ ಭವನಕ್ಕೆ  2 ಕೋಟಿ ಅನುದಾನ ಕೊಡಿ‌. ಮೈಸೂರು- ಮಾನಂದವಾಡಿ ಡಬ್ಬಲ್ ರೋಡ್ ನಿರ್ಮಾಣ ಅನುದಾನಕ್ಕೆ ಮನವಿ ಶಾಸಕ ಅನಿಲ್ ಚಿಕ್ಕಮಾದು ಮಾಡಿದದರು. ತಾಲೀನ ಪರವಾಗಿ ನಾವು ಖುಣ ತೀರಿಸಬೇಕಿದೆ ಎಂದರು.

Key words: Siddaramaiah, continue, CM, 5 years MLA, Anil Chikkamadu