ವಿಜಯನಗರ,ಫೆಬ್ರವರಿ,8,2023(www.justkannada.in): ಮಾಜಿ ಸಿಎಂ ಸಿದ್ಧರಾಮಯ್ಯಗೆ ಇತ್ತೀಷೆಗಷ್ಟೆ ಯಾದಗಿರಿಯ ಬಿಜೆಪಿ ಮುಖಂಡರೊಬ್ಬರು ತಮ್ಮ ಕ್ಷೇತ್ರಕ್ಕೆ ಬಂದು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ ತಮ್ಮ ವತಿಯಿಂದ ಒಂದು ಕೋಟಿ ರೂಪಾಯಿಗಳನ್ನು ನೀಡುವುದಾಗಿ ಆಫರ್ ನೀಡಿದ್ದರು.![]()
ಇದೀಗ ವಿಜಯನಗರ ಜಿಲ್ಲೆ ಹೊಸಪೇಟೆಯ ಅಭಿಮಾನಿಯೊಬ್ಬರು ಸಹ ಇದೇ ರೀತಿ ಸಿದ್ಧರಾಮಯ್ಯಗೆ ಆಹ್ವಾನ ನೀಡಿದ್ದಾರೆ. ಗಾದಿಗನೂರು ಗ್ರಾಮದ ಮಲಿಯಪ್ಪ ಎಂಬುವವರು ಹೊಸಪೇಟೆಯಿಂದ ಸಿದ್ಧರಾಮಯ್ಯ ಸ್ಪರ್ಧಿಸಿದರೇ 2ಎಕರೆ ಜಮೀನು ಮಾರಿ 1 ಕೋಟಿ ರೂ ಹಣ ನೀಡುತ್ತೇನೆ ಎಂದು ಹೇಳಿದ್ದಾರೆ. ಮಲಿಯಪ್ಪ ಅವರ ಬಳಿ 6 ಎಕರೆ ಹೊಲ ಇದ್ದು 2 ಎಕರೆ ಮಾರಿ ಹಣ ನೀಡುವುದಾಗಿ ತಿಳಿಸಿದ್ದಾರೆ.
ಹೊಸಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸಿದ್ದರಾಮಯ್ಯನವರು ಇಲ್ಲಿಂದ ಸ್ಪರ್ಧಿಸಿ ಗೆದ್ದರೆ ಮಾತ್ರ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ. ಅವರು ಸ್ಪರ್ಧಿಸುವುದಾದರೆ ತನಗಿರುವ 6 ಎಕರೆ ಜಮೀನನಲ್ಲಿ ಎರಡು ಎಕರೆ ಮಾರಿ ರೂ. 1 ಕೋಟಿಯನ್ನು ನೀಡುವುದಾಗಿ ಅವರು ತಿಳಿಸಿದ್ದಾರೆ.
Key words: Siddaramaiah –contests- Hospet, – Rs 1 crore– invitation – fan.







