ಸಿದ್ಧರಾಮಯ್ಯ ಅವರನ್ನೇ ಐದು ವರ್ಷದ ಅವಧಿಗೂ ಸಿಎಂ ಎಂದು ಘೋಷಿಸಿ: ಪತ್ರ ಚಳುವಳಿ

ಮೈಸೂರು,ಅಕ್ಟೋಬರ್,29,2025 (www.justkannada.in): ಸಿದ್ಧರಾಮಯ್ಯ ಅವರನ್ನೇ ಐದು ವರ್ಷದ ಅವಧಿಗೂ ಮುಖ್ಯಮಂತ್ರಿ ಎಂದು ಘೋಷಿಸಿ ಎಂದು ಒತ್ತಾಯಿಸಿ ಕಾಂಗ್ರೆಸ್ ನಾಯಕ ರಾಹುಲ್‍ ಗಾಂಧಿಗೆ ಪತ್ರ ಚಳುವಳಿಯ ಮೂಲಕ  ಅಹಿಂದ ಸಂಘಟನೆಗಳು ಮನವಿ ಮಾಡಿದವು.

ಮೈಸೂರಿನಲ್ಲಿ ಅಹಿಂದ ಮುಖಂಡರು ಹಾಗೂ ಕರ್ನಾಟಕರಾಜ್ಯ ಹಿಂದುಳಿದವರ್ಗಗಳಜಾಗೃತ ವೇದಿಕೆ (ರಿ) ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ನೇತೃತ್ವದಲ್ಲಿ ಪತ್ರ ಚಳುವಳಿ ನಡೆಯಿತು.

ಈ ವೇಳೆ ಮಾತನಾಡಿದ ಕೆ.ಎಸ್.ಶಿವರಾಮು,  ಈ ನಾಡು ಕಂಡಂತಹ ಅಪ್ರತಿಮ ನಾಯಕ ಶೋಷಿತ ಸಮುದಾಯಗಳ ಗಟ್ಟಿಧ್ವನಿ ಅಹಿಂದ ಸಮುದಾಯಗಳ ಸಿದ್ದರಾಮಯ್ಯ ರವರ ನಾಯಕತ್ವದಲ್ಲಿ 2023ರ ವಿಧಾನಸ ಭಾಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನವನ್ನಗೆಲ್ಲುವುದರ ಮೂಲಕ ಕರ್ನಾಟಕರಾಜ್ಯದಲ್ಲಿ ಮತ್ತೆಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಯಿತು. ಈ ದೊಡ್ಡ  ಮಟ್ಟದ  ಗೆಲುವಿಗೆ ಸಿದ್ದರಾಮಯ್ಯನವರ ನಾಯಕತ್ವ ಹಾಗೂ ಅಹಿಂದ ಸಮುದಾಯಗಳು ಸಿದ್ದರಾಮಯ್ಯರ ನಾಯಕತ್ವದಲ್ಲಿಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವುದರ ಮೂಲಕ ಕಾಂಗ್ರೆಸ್ ಪಕ್ಷದ ಸರ್ಕಾರ ಕರ್ನಾಟಕದಲ್ಲಿ ಆಳ್ವಿಕೆ ನಡೆಸಲು ಕಾರಣಿಭೂತರು ಸಿದ್ದರಾಮಯ್ಯ ಅವರು ನಾಯಕತ್ವದಲ್ಲಿ ನಂಬಿಕೆ ಇಟ್ಟು ಇಡಿ ಶೋಷಿತ ಸಮುದಾಯಗಳು ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷದ ಜೊತೆಗೆ ಗಟ್ಟಿಯಾಗಿ ನಿಂತಿವೆ, ಮುಂದೆ ಕೂಡ ರಾಜ್ಯದಲ್ಲಿ ಮತ್ತು ದೇಶದಲ್ಲಿ ಶೋಷಿತ ಸಮುದಾಯಗಳು ನಿಮ್ಮನ್ನು ಈ ದೇಶದ  ಪ್ರಧಾನಮಂತ್ರಿಯಾಗಿ ನೋಡಬೇಕೆಂದು ಬಯಸುತ್ತೇವೆ ಮತ್ತು ಬೆಂಬಲಿಸುತ್ತೆವೆ.

ರಾಹುಲ್‍ ಗಾಂಧಿ ಅವರೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ನೆಲೆ ತುಂಬಾ ಭದ್ರವಾಗಿದೆ ಅದಕ್ಕೆ ಮೂಲ ಕಾರಣ ಸಿದ್ದರಾಮಯ್ಯ ರವರ ಆಡಳಿತ ಜನಪರ ಗ್ಯಾರಂಟಿ ಯೋಜನೆ ನಿರ್ವಹಣೆ ಅಹಿಂದ ಸಮುದಾಯಗಳ ಮೇಲೆ ಅವರು ಇಟ್ಟಿರುವ ಪ್ರೀತಿ ಕಾಳಜಿ ಸಾಮಾಜಿಕ ನ್ಯಾಯ ಪರ ಸಿದ್ಧಾಂತ ಶೋಷಿತ ಸಮುದಾಯಗಳಿಗೆ ನೀಡುತ್ತಿರುವ ಕೊಡುಗೆಗಳು ಸಮುದಾಯಗಳಿಗೆ ಗಟ್ಟಿಧ್ವನಿ ಯಾಗಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಆಡಳಿತ ನಡೆಸುತ್ತಿದ್ದಾರೆ. ನಿಮ್ಮನ್ನು ಭೇಟಿ ಮಾಡಲು ಕರ್ನಾಟಕದ ಅಹಿಂದ ನಾಯಕರುಗಳು ನಿಯೋಗ ಆಗಮಿಸುತ್ತಿದ್ದು ಸಮಯವನ್ನು ನಿಗದಿ ಮಾಡಿಕೊಳ್ಳಲು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ಪತ್ರ ಚಳುವಳಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷರು ಅಹಿಂದ ಮುಖಂಡ ಕೆ.ಎಸ್.ಶಿವರಾಮು ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷರಾದ ಎಚ್‍ಎಸ್ ಪ್ರಕಾಶ್‍ಜಿ ಲ್ಲಾ ಮಡಿವಾಳರ ಸಂಘದ ಅಧ್ಯಕ್ಷರಾದ ರವೀನಂದನ್‍ ಜಿಲ್ಲಾಉಪ್ಪಾರರ ಸಂಘದ ಅಧ್ಯಕ್ಷರಾದ ಯೋಗೇಶ್‍ಉಪ್ಪಾರ್‍ದಲಿತ ಮಹಾಸಭದ ಅಧ್ಯಕ್ಷರಾದ ರಾಜೇಶ್‍ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ದೇವಗಲ್ಲಿ ಸೋಮಶೇಖರ್‍ ದಲಿತ ಮುಖಂಡರಾದ ರಾಜಶೇಖರ್‍ಎಫ್ ಎಂ ಕಲೀಮ್, ರಹೀಮ್‍ ಖಾನ್ ಮಹಮದ್ ಆಲಿ ಲೋಕೇಶ್‍ಕುಮಾರ್ ಹರೀಶ್ ಮೊಗಣ್ಣ  ಮಂಜುಳಾ ಮಂಜುನಾಥ್  ಛಾಯಾ ಅನಿಲ್ ನಿಂಗರಾಜು ಸುನಿಲ್  ನಾರಾಯಣ್‍ರವಿ ನಜರ್ಬಾದ್ ದಿನೇಶ್ ಶಿಂಶ ಮಹೇಶ್ ಸಂತೋಷ್ ಕಿರಾಳ್ ಕಾಳೇಗೌಡ ಅಪ್ಪುಗೌಡ ಕುರುಬರಹಳ್ಳಿ ಪ್ರಕಾಶ್ ಉಪಸ್ಥಿತರಿದ್ದರು.

Key words: Declare, Siddaramaiah, CM, five-year, term, Letter movement