ಬಿಎಸ್ ವೈ ನಿವಾಸದ ಮೇಲೆ ಕಲ್ಲು ತೂರಾಟದ ಹಿಂದೆ ಕಾಂಗ್ರೆಸ್ ಕೈವಾಡ ಎಂದಿದ್ದ ಸಿಎಂ ಬೊಮ್ಮಾಯಿಗೆ ಸಿದ್ಧರಾಮಯ್ಯ ತಿರುಗೇಟು.

ಮೈಸೂರು,ಮಾರ್ಚ್,28,2023(www.justkannada.in): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ಘಟನೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದ್ಧ ಸಿಎಂ ಬಸವರಾಜ ಬೊಮ್ಮಾಯಿಗೆ ಸಿದ‍್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಿದ್ಧರಾಮಯ್ಯ, ಕಲ್ಲು ತೂರಾಟದ ಬಗ್ಗೆ ಬಿಎಸ್ ವೈ ಏನು ಹೇಳಿದ್ದಾರೆ. ಕಲ್ಲುತೂರಾಟಕ್ಕೂ ಕಾಂಗ್ರೆಸ್ ಗೂ ಸಂಬಂಧ ಇಲ್ಲ ಎಂದಿದ್ದಾರೆ.  ಯಡಿಯೂರಪ್ಪನವರೇ ಕಾಂಗ್ರೆಸ್  ಗೆ ಸಂಬಂಧ ಇಲ್ಲ ಅಂತಾ ಹೇಳಿದ್ದಾರೆ. ಬಿಎಸ್ ವೈಗಿಂತ ಸಿಎಂ ಬೊಮ್ಮಾಯಿಗೆ ಹೆಚ್ಚು ಗೊತ್ತಾ ಬೊಮ್ಮಾಯಿಗಿಂತ ಹೆಚ್ಚು ಮಾಹಿತಿ ಬಿಎಸ್ ವೈಗೆ ಇರುತ್ತೆ ಎಂದು ಟಾಂಗ್ ನೀಡಿದರು.

ಕಲ್ಲು ತೂರಾಟ ಆರೋಪಿ ತಮ್ಮ ಜೊತೆ ಫೋಟೊ ತೆಗೆಸಿಕೊಂಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ,  ಯಾರೋ ಬರುತ್ತಾರೆ. ನನ್ನ ಜೊತೆ ಫೋಟೊ ತೆಗೆದುಕೊಳ್ಳುತ್ತಾರೆ. ಅವರು ಒಳ್ಳೆಯವರು ಕೆಟ್ಟವರ  ಅಂತಾ ನನಗೆ ಏನು ಗೊತ್ತು . ರಾಜಕೀಯ ಕಾರಣಕ್ಕಾಗಿ ಏನೇನೋ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

Key words: Siddaramaiah – CM Bommai – Congress – stone pelting – BSY’s residence.