ಸಿದ್ದರಾಮಯ್ಯ ಮತ್ತೆ ಸಿಎಂ ಹೇಳಿಕೆ ವಿಚಾರ : ನಾನು ಸನ್ಯಾಸಿ ಅಲ್ಲ ಅಂದ್ರು ಸಚಿವ ಡಿ.ಕೆ ಶಿವಕುಮಾರ್..

ಹುಬ್ಬಳ್ಳಿ,ಮೇ,14,2019(www.justkannada.in):  ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಅವರ ಬೆಂಬಲಿಗರು ಹೇಳಿಕೆ ನೀಡುತ್ತಿರುವ ಬೆನ್ನಲ್ಲೆ ಈ ಬಗ್ಗೆ ಮಾತನಾಡಿರುವ ಸಚಿವ ಡಿ.ಕೆ ಶಿವಕುಮಾರ್, ನಾನು ಸನ್ಯಾಸಿ ಅಲ್ಲ. ನನಗೂ ಸಿಎಂ ಆಗುವ ಆಸೆ ಇದೆ. ಈ ಬಗ್ಗೆ ಈಗಲೇ ಚರ್ಚೆ ಬೇಡ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಹೆಚ್.ಡಿ ಕುಮಾರಸ್ವಾಮಿ ಅವರೇ ಈ ನಾಲ್ಕು ವರ್ಷ ಸಿಎಂ ಆಗಿರುತ್ತಾರೆ. ನಂತರ 2022ಕ್ಕೆ ವಿಧಾನಸಭಾ ಚುನಾವಣೆ ನಡೆಯುತ್ತದೆ. ಮೊದಲು ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರೋಣ. ಅಮೇಲೆ ಯಾರು ಸಿಎಂ ಅಂತಾ ತೀರ್ಮಾನ ಮಾಡಲಿ ಎಂದು ಹೇಳಿದರು.

ಮುಂದೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಆ ಪಕ್ಷದ ನಾಯಕರು ಸಿಎಂ ಆಗುತ್ತಾರೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಯಾರು ಸಿಎಂ ಆಗ್ತಾರೆ ಎಂಬುದನ್ನ ಹೈಕಮಾಂಡ್ ನಿರ್ಧರಿಸುತ್ತದೆ. ಈ ಬಗ್ಗೆ ಈಗ ಚರ್ಚೆ ಬೇಡ ಎಂದು ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Siddaramaiah- again-CM- statement-I am not – monk- Minister- DK Shivakumar