ಕನ್ನಡ ಭಾಷೆ ಎಲ್ಲರೂ ಭಾಷೆ ಉಳಿಸಲು ಪಣ ತೊಡಬೇಕು- ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕರೆ

ಮಂಡ್ಯ,ನವೆಂಬರ್,26,2025 (www.justkannada.in):  ಕನ್ನಡ ಭಾಷೆಗೆ 2000 ವರ್ಷಗಳಿಗೂ ಹೆಚ್ಚಿನ ಇತಿಹಾಸ ವಿದ್ದು, ಎಲ್ಲರೂ ಭಾಷೆ ಉಳಿಸಲು ಪಣ ತೊಡಬೇಕು ಎ೦ದು ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲಪತಿ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.

ಆದಿ ಚುಂಚನಗಿರಿ ವಿಶ್ವ ವಿದ್ಯಾಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ  ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕನ್ನಡ ಒಂದು ಸಮೃದ್ಧ ಭಾಷೆ, ಅದನ್ನು ಬಳಿಸಿದರೆ ಸಾಕು, ಅದು ತಾನಾಗೇ ಬೆಳೆಯುತ್ತದೆ. ಕನ್ನಡಕ್ಕೆ ಮೊದಲ ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ ಕುವೆಂಪುರವರಿಗೆ ಆರಂಭದಲ್ಲಿ ಇಂಗ್ಲೀಷ್ ಭಾಷೆ ಬಗ್ಗೆ ಒಲವಿತ್ತು. ಅವರ ಮೊದಲ ಕವನ ಸಂಗ್ರಹ ಇಂಗ್ಲಿಷ್ ನಲ್ಲಿ ರಚಿಸಿದ್ದರು. ಆ ಕವನ ಸಂಕಲನವನ್ನು ಓದಿದ ಐರಿಷ್‌ ಸಾಹಿತಿ, ಕುವೆಂಪುರವರಿಗೆ ನಿಮ್ಮ ಮಾತೃ ಭಾಷೆಯಲ್ಲಿ ಬರೆಯಿರಿ ಎಂದು ಸಲಹೆ ನನೀಡಿದ್ದರಂತೆ. ಇಂಗ್ಲಿಷ್  ಭಾಷೆಯಲ್ಲಿ ವಿಪುಲವಾಗಿರುವ ಭಾಷಾ ಸಂಪತ್ತು ಕನ್ನಡದಲ್ಲಿ ಇದಯೇ ಎಂದು ಆಲೋಚನೆಯಲ್ಲಿ ಇದ್ದ ಕುವೆಂಪು ಅವರು ಮುಂದೆ ತಮ್ಮ ಬರವಣಿಗೆ ಮೂಲಕ ಸಹಸ್ರಾರು ಹೊಸ ಪದಗಳನ್ನು‌ಸೃಷ್ಠಿಸಿದರು. ಕನ್ನಡ ಭಾಷೆ ವಿಸ್ತಾರವನ್ನು ಜಗತ್ತಿಗೆ ತೋರಿದರು ಎಂದರು.

ತಮ್ಮ ವಿಶ್ವವಿದ್ಯಾಲಯದಲ್ಲಿ ಇಪ್ಪತ್ತು ರಾಜ್ಯಗಳ ಕನ್ನಡೇತರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎಲ್ಲರೂ ಕನ್ನಡ ಕಲಿಯುತ್ತಿದ್ದಾರೆ. ಅದರಲ್ಲೂ ವೈದ್ಯಕೀಯ ವಿದ್ಯಾರ್ಥಿಗಳು ಕನ್ನಡ ಕಲಿಯುವುದು ಅವಶ್ಯ.  ಪ್ರಖ್ಯಾತ ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ತಮ್ಮ ಸಂಪಾದಕತ್ವದಲ್ಲಿ ಪ್ರಕಟಗೊಂಡ ಜಗದ್ಗುರು ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಯವರ ಜೀವನ ಚರಿತ್ರೆ ಕಾಲಾತೀತ ಗ್ರಂಥದ ಬಗ್ಗೆ ನೆನಪಿಸಿಕೊಂಡರು.  ಈ ಸಂದರ್ಭದಲ್ಲಿ ಒಂಭತ್ತು ಪುಸ್ತಕ ಗಳನ್ನು ಬಿಡುಗಡೆ ಮಾಡಲಾಯಿತು.

2025ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಎನ್. ಎಸ್ ರಾಮೇಗೌಡರು ಹಾಗೂ ಪತ್ರಕರ್ತ ಎಂ. ಸಿದ್ದರಾಜು  ಅವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳು ಕಣ್ಮನ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಸಮಾರಂಭದ ಮೆರಗನ್ನು ಹೆಚ್ಚಿಸಿದರು.

ಸಮಾರಂಭದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲ ಸಚಿವ ಡಾ.ಸಿ.ಕೆ ಸುಬ್ಬರಾಯ, ಕುಲಪತಿಗಳಾದ ಡಾ. ಎಸ್ .ಎನ್ ಶ್ರೀಧರ, ಡಾ ಬಿ ರಮೇಶ್, ಡಾ ಶಿವರಾಮ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಟ್ರಸ್ಟ್ ಈಡಿ ದೇವರಾಜ್ ಸಹ ಉಪಸ್ಥಿತಿರಿದ್ದರು.

Key words: Kannada Language, save, Shri Nirmalanandanath Swamiji