Friday, September 18, 2026

BDA Apartments

ಆರ್.ಅಶೋಕ್ ವಿರುದ್ದ ನಡೆದ ಷಡ್ಯಂತ್ರ ನೋಡಿ ದಿಗ್ಬ್ರಮೆಯಾಗಿದೆ- ಡಿಸಿಎಂ ಡಿಕೆ...
Home Front Page ಆರ್.ಅಶೋಕ್ ವಿರುದ್ದ ನಡೆದ ಷಡ್ಯಂತ್ರ ನೋಡಿ ದಿಗ್ಬ್ರಮೆಯಾಗಿದೆ- ಡಿಸಿಎಂ ಡಿಕೆ ಶಿವಕುಮಾರ್

ಆರ್.ಅಶೋಕ್ ವಿರುದ್ದ ನಡೆದ ಷಡ್ಯಂತ್ರ ನೋಡಿ ದಿಗ್ಬ್ರಮೆಯಾಗಿದೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಸೆಪ್ಟಂಬರ್,21,2024 (www.justkannada.in): ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಎಚ್‌ಐವಿ ಸೋಂಕು ಹರಡಲು ಸಂಚು ನಡೆಸಿದ್ದಾರೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಪಾಪ ಆರ್‌ ಅಶೋಕ್ ವಿರುದ್ಧ ನಡೆದ ಷಡ್ಯಂತ್ರ ನೋಡಿ ನನಗೆ ದಿಗ್ಬ್ರಮೆ ಆಗಿದೆ ಎಂದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಆರ್‌ ಅಶೋಕ್ ಮೇಲೂ ಸೋಂಕು ಹರಡಿಸಲು ಸಂಚು ನಡೆದಿತ್ತು, ಅದನ್ನು ಕೇಳಿ ನನಗೆ ದಿಗ್ಬ್ರಮೆ ಆಗಿದೆ. ಎಲ್ಲಿಯೂ ಕೂಡ ಈ ರೀತಿಯ ಸಂಚು ನೋಡಿಲ್ಲ. ಅಶೋಕ್ ಪ್ರಾರಂಭದ ಮಾತು ನೋಡಿದ್ದೇನೆ ಆದರೆ, ಎರಡನೇ ಬಾರಿಯ ಮಾತು ಕೇಳಿಲ್ಲ ಎಂದರು.

ಈ ಸಂಚಿನ ಬಗ್ಗೆ  ಆಶೋಕಣ್ಣ, ಸಿ.ಟಿ ರವಿಯಣ್ಣ,  ವಿಜಯೇಂದ್ರಣ್ಣ ಮಾತನಾಡಲಿ. ಸತ್ಯ ಏನಿದೆ ಅಂತ ಪರಿಶೀಲಿಸಿ ತಿಳಿಸಲಿ. ಕುಮಾರಣ್ಣ, ಡಾ.ಮಂಜುನಾಥ್ ಅವರು ಕೂಡಾ ಉತ್ತರಿಸಲಿ ಎಂದು ಬಿಜೆಪಿ ನಾಯಕರ ಕಾಲೆಳೆದರು.

ಡಿಕೆ ಬ್ರದರ್ಸ್ ರಿಂದ ಸಂಚು  ಎಂಬ ಶಾಸಕ ಅಶ್ವಥ್ ನಾರಾಯಣ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್,  ಅವರು ನನ್ನನ್ನ ನೆನಪಿಸಿ ಕೊಳ್ಳುತ್ತಲೇ ಇರಲಿ. ನಾನು ಏನು ಹೇಳಲ್ಲ ಎಂದರು.

Key words: Shocked, conspiracy, against, R. Ashok, DCM DK Shivakumar