ಆಸ್ಟ್ರೇಲಿಯಾ ಓಪನ್‌ ಟೆನಿಸ್: ನಡಾಲ್‌’ಗೆ ಶಾಕ್ ನೀಡಿದ ಥೀಮ್

ಮೆಲ್ಬೋರ್ನ್, ಜನವರಿ 30, 2019 (www.justkannada.in): ಆಸ್ಟ್ರೀಯದ ಡೊಮಿನಿಕ್ ಥೀಮ್ ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್‌ರನ್ನು ಮಣಿಸಿ ಶಾಕ್ ನೀಡಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿರುವ ಥೀಮ್ ಮುಂದಿನ ಸುತ್ತಿನಲ್ಲಿ ಅಲೆಕ್ಸಾಂಡರ್ ಝ್ವೆರೆವ್‌ರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಫೈಟ್‌ನಲ್ಲಿ ಐದನೇ ಶ್ರೇಯಾಂಕದ ಥೀಮ್ ಸ್ಪೇನ್ ಸೂಪರ್‌ಸ್ಟಾರ್ ನಡಾಲ್‌ರನ್ನು 7-6(7/3), 7-6(7/4), 4-6, 7-6(8/6)ಸೆಟ್‌ಗಳಿಂದ ಮಣಿಸಿದರು.

ಈ ಮೂಲಕ 20ನೇ ಗ್ರಾನ್‌ಸ್ಲಾಮ್ ಜಯಿಸಿ ದಾಖಲೆ ಸಮಬಲಗೊಳಿಸುವ ನಡಾಲ್ ಕನಸಿಗೆ ತಣ್ಣೀರೆರಚಿದರು. ಥೀಮ್ ಮುಂದಿನ ಸುತ್ತಿನಲ್ಲಿ ಜರ್ಮನಿಯ ಏಳನೇ ಶ್ರೇಯಾಂಕದ ಝ್ವೆರೆವ್‌ರನ್ನು ಎದುರಿಸಲಿದ್ದಾರೆ. ಝ್ವೆರೆವ್ ಹಿರಿಯ ಆಟಗಾರ ಸ್ಟಾನ್ ವಾವ್ರಿಂಕರನ್ನು ಮಣಿಸಿ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ.