ನಮ್ಮವರಲ್ಲೆ ಕೆಲವರು ಸಹಿಸದೆ ನನ್ನನ್ನ ಸೋಲುವಂತೆ ಮಾಡಿದ್ರು- ಮಾಜಿ ಸಿಎಂ ಸಿದ್ಧರಾಮಯ್ಯ ಬೇಸರ……

ಮೈಸೂರು,ಡಿಸೆಂಬರ್, 18,2020(www.justkannada.in): ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯ ಕೊಟ್ಟ ಕ್ಷೇತ್ರ ನಿಜ. ಆದ್ರೆ ರಾಜಕೀಯವಾಗಿ ಮಾನಸಿಕ ವೇದನೆ ಕೊಟ್ಟ ಕ್ಷೇತ್ರವೂ ಹೌದು. ಇಷ್ಟೊಂದು ಮತಗಳಿಂದ ಸೋಲ್ತಿನಿ ಅಂತ ಗೊತ್ತಿರಲಿಲ್ಲ. ಜನ ಪ್ರೀತಿ ತೋರ್ಸಿದ್ರು ಆದ್ರೆ ಓಟ್ ಹಾಕಲಿಲ್ಲ. ನನ್ನ ಸೋಲಿಗೆ ಬಿಜೆಪಿ, ಜೆಡಿಎಸ್ ಹಾಗೂ ನಮ್ಮ ಕಾಂಗ್ರೆಸ್ ನವರೂ ಕಾರಣ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಬೇಸರ ವ್ಯಕ್ತಪಡಿಸಿದರು.Teachers,solve,problems,Government,bound,Minister,R.Ashok

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ  ಗ್ರಾಮ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿದ  ಮಾಜಿ ಸಿಎಂ ಸಿದ್ದರಾಮಯ್ಯ  ನನ್ನನ್ನ ಸೋಲಿಸೋಕೆ ಏನು ಕಾರಣ ಹೇಳಿ.? ಎಂದು ಕ್ಷೇತ್ರದ ಜನರಿಗೆ ಪ್ರಶ್ನೆ ಹಾಕಿದರು. ನನ್ನನ್ನು ಸೋಲಿಸೋಕೆ 1,2,3,4 ಅಂತ ಕಾರಣ ಕೊಡಿ… ನನ್ನ‌ ವಿರುದ್ದ ನಿಂತದ್ದ ಅಭ್ಯರ್ಥಿಗಳ ಪ್ಲಸ್ ಪಾಯಿಂಟ್ 1,2,3,4. ಅಂತ ಪಟ್ಟಿ ಕೊಡಿ. ನಾನು ಇಷ್ಟೆಲ್ಲಾ ಮಾಡಿದ್ದಕ್ಕೆ ಸೋಲಿಸೋದಾ ನನ್ನನ್ನ. ನಾನೇನಾದರೂ ಜೈಲಿಗೆ ಹೋಗಿದ್ನ, ಜಾತಿ ಮಾಡಿದ್ನ. ಐದು ವರ್ಷ ಸಂಪೂರ್ಣ ಅಧಿಕಾರ ನಡೆಸಿದ ಅಂತ ಹೊಟ್ಟೆಕಿಚ್ಚಿನಿಂದ ಸೋಲಿಸಿದ್ರು. ದೇವರಾಜು ಅರಸು ನಂತರ ಜನಪ್ರಿಯ ಮುಖ್ಯಮಂತ್ರಿ ಆದ ಅಂತ. ನೀವೆ ಪ್ರಶ್ನೆ ಹಾಕಿಕೊಳ್ಳಿ, ಏನಕ್ಕೆ ಸೋಲಿಸಿದ್ವಿ ಅಂತ ಎಂದು ಹೇಳಿದರು.

ಸೋಲಿನ ಮರ್ಮಾಘಾತವನ್ನ ಸಹಿಸಿಕೊಳ್ಳಲಾಗಲ್ಲ…

ನಾನು ಮುಂದೆ ಚುನಾವಣೆಗೆ  ನಿಲ್ಲುತ್ತೇನೋ ಇಲ್ವೋ ಗೊತ್ತಿಲ್ಲ. ಆದರೆ ಸೋಲಿನ ಮರ್ಮಾಘಾತವನ್ನ ಸಹಿಸಿಕೊಳ್ಳಲಾಗಲ್ಲ. ಬಾದಾಮಿಯಲ್ಲಿ ಗೆಲ್ಲಿಸದಿದ್ರೆ ನನ್ನ ಭವಿಷ್ಯ ಏನಾಗ್ತಿತ್ತು. ನಾಡಿನ ಜನತೆಯ ಸ್ಥಿತಿ ಏನಾಗ್ತಿತ್ತು. ನನ್ನ ಫ್ಯೂಚರ್ ಮಂಕಾಗ್ತಿತ್ತು, ಕತ್ತಲೆ ಆಗ್ತಿತ್ತಲ್ವಾ. ಉಪ ಚುನಾವಣೆಯ ಋಣ ತೀರಿಸಲೆಂದೇ ಚಾಮುಂಡೇಶ್ವರಿಯಲ್ಲಿ ನಿಂತಿದ್ದೆ. ಆದ್ರೆ ಜನ ನನ್ನನ್ನು ಸೋಲಿಸಿದ್ರು ಎಂದು ಸಿದ್ಧರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಹಾಗೆಯೇ  ಕ್ಷುಲಕ್ಕ ಕಾರಣಕ್ಕರ ಪಕ್ಷ ವಿರುದ್ದ ಕೆಲಸ ಮಾಡಬಾರದು. ನಾಯಕತ್ವ ಇಷ್ಡ ಇಲ್ಲ ಅಂದ್ರೆ ಪಕ್ಷ ಬಿಟ್ಟು ಹೋಗಲಿ. ಹೋಗುವವರನ್ನ ಪಕ್ಷ ಇರೀ ಅಂತ ಯಾರು ಹೇಳೋಲ್ಲ. ಯಾರು ಪಕ್ಷಕ್ಕೆ ಅನಿವಾರ್ಯ ಆಗೋಲ್ಲ. ವ್ಯಕ್ತಿಗೆ ಪಕ್ಷ ಅನಿವಾರ್ಯ ಹೊರತು ಪಕ್ಷಕ್ಕೆ ವ್ಯಕ್ತಿ ಮುಖ್ಯವಲ್ಲ. ನನ್ನ ಸೋಲಿಗೆ ಅನೇಕ ಕಾರಣ ಇದೆ ಅದನ್ನ ಈಗ ಹೇಳೋಲ್ಲ.

ನಮ್ಮವರಲ್ಲೆ ಕೆಲವರು ಸಹಿಸದೆ ನನ್ನನ್ನ ಸೋಲುವಂತೆ ಮಾಡಿದ್ರು.

ನಾವು ಪ್ರಚಾರ ಸರಿಯಾಗಿ ಮಾಡಲಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟ  ಸಂಪೂರ್ಣವಾಗಿ ಈಡೇರಿಸಿದ್ದು ನಮ್ಮ ಸರ್ಕಾರ ಮಾತ್ರ. ಹೀಗಾಗಿ ನನ್ನನ್ನ ಸೋಲಿಸೋಕೆ ಜೆಡಿಎಸ್ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡರು. ನನ್ನ ವಿರುದ್ದ ಬಿಜೆಪಿ ವೀಕ್ ಕ್ಯಾಂಡಿಡೇಟ್ ಹಾಕಿದ್ರು. ಸಿಎಂ ವಿರುದ್ದ ಎಂತಹ ಅಭ್ಯರ್ಥಿ ಹಾಕಬೇಕು. ಗ್ರಾಮ ಪಂಚಾಯತಿ ಸೋತವನ್ನ ತಂದು ಎಲೆಕ್ಷನ್ ‌ಗೆ ಹಾಕಿದ್ರು. ಅಂದ್ರೆ ಇವರದ್ದು ಎಂತ ಒಳಸಂಚು ಇರಬೇಕು ಯೋಚನೆ ಮಾಡಿ. ನಮ್ಮವರಲ್ಲೆ ಕೆಲವರಿಗೆ ನಾನು ಮತ್ತೆ ಸಿಎಂ ಆಗೋದು ಬೇಕಿರಲಿಲ್ಲ. ನಮ್ಮವರಲ್ಲೆ ಕೆಲವರು ಸಹಿಸದೆ ನನ್ನನ್ನ ಸೋಲುವಂತೆ ಮಾಡಿದ್ರು ಎಂದು ಸಿದ್ಧರಾಮಯ್ಯ ಕಿಡಿಕಾರಿದರು.shock-defeat-chamundeshwari-constituency-former-cm-siddaramaiah

ಜಾತಿವಾರು ಸಮೀಕ್ಷೆ: ಪುಟ್ಟರಂಗಶೆಟ್ಟಿಯನ್ನ ಬೆದರಿಸಿ ತಗೋಬೇಡ ಅದನ್ನ ಅಂದ್ರು….

1931ರಲ್ಲೇ‌ ಜಾತಿವಾರು ಸಮೀಕ್ಷೆ ಮಾಡಿಸಿದ್ದೆ. ನನ್ನ ಅವಧಿಯಲ್ಲಿ 162ಕೋಟಿ ಖರ್ಚು ಮಾಡಿ ಜಾತಿವಾರು ಸಮೀಕ್ಷೆ ಮಾಡಿಸಿದ್ದೆ. ಆದರೆ ಅದನ್ನ ಆ ಮೇಲೆ ಕೊಡ್ತಿನಿ ಇನ್ನು ಸಮೀಕ್ಷೆ ಪೂರ್ಣ ಆಗಿಲ್ಲ ಅಂದರು. ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಬಳಿಕ ಅದನ್ನ ತೆಗೆದುಕೊಳ್ಳಬೇಡ ಎಂದ್ರು. ಆ ವೇಳೆ ಪುಟ್ಟರಂಗ ಶೆಟ್ಟಿ ಹಿಂದೂಳಿದ ವರ್ಗಗಳ‌ ಸಚಿವ ಆಗಿದ್ರು. ಪುಟ್ಟರಂಗಶೆಟ್ಟಿಯನ್ನ ಬೆದರಿಸಿ ತಗೋಬೇಡ ಅದನ್ನ ಅಂದರು. ಅದು ಹೊರಗೆ ಬಂದ್ರೆ ಕೆಳಗಿರುವ ಜನರು ಮೇಲೆ‌ ಬರ್ತಾರೆ. ಯಾವ ಯಾವ ವರ್ಗಕ್ಕೆ ಏನು ಕೆಲಸ ಆಗಿದೆ ಅಂತ ಗೊತ್ತಾಗ್ತಿತ್ತು. ಆದರೆ ಅದನ್ನ ಹೊರಗೆ ತರುವ ಕೆಲಸ ಬಿಜೆಪಿ, ಜೆಡಿಎಸ್ ಮಾಡಲಿಲ್ಲ. ಇದರಿಂದ ಬಡವರಿಗೆ ನಿಜವಾಗಿ ಅನುಕೂಲವಾಗುವಂತ ಸಮೀಕ್ಷೆ ಎಂದು  ಹೆಚ್.ಡಿ ಕುಮಾರಸ್ವಾಮಿ ವಿರುದ್ಧ  ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Key words: shock –defeat-chamundeshwari-constituency- former CM Siddaramaiah.