ರಜನಿ 169ನೇ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ: ಹೊಸ ಸುದ್ದಿ ಕೇಳಿ ಫ್ಯಾನ್ಸ್ ಖುಷ್ !

ಬೆಂಗಳೂರು, ಜೂನ್ 09, 2022 (www.justkannada.in): ರಜನಿ ಹಾಗೂ ಶಿವರಾಜ್​ಕುಮಾರ್ ಒಟ್ಟಾಗಿ ನಟಿಸುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ಈ ಬಗ್ಗೆ ವರದಿ ಬಿತ್ತರವಾಗಿತ್ತು. ಈಗ ಶಿವರಾಜ್​ಕುಮಾರ್ ಅವರು ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಚಿತ್ರಕ್ಕೆ ನೆಲ್ಸನ್ ದಿಲೀಪ್​ಕುಮಾರ್ ಆ್ಯಕ್ಷನ್​ ಕಟ್​ ಹೇಳಿತ್ತಿದ್ದು, ರಜನಿ 169ನೇ ಚಿತ್ರದ ನಿರ್ದೇಶನ ಮಾಡುವ ಅವಕಾಶ ನೆಲ್ಸನ್ ಅವರಿಗೆ ಸಿಕ್ಕಿತ್ತು. ಇದೀಗ ಈ ಸಿನಿಮಾದಲ್ಲಿ ರಜನಿ ಹಾಗೂ ಶಿವರಾಜ್​ಕುಮಾರ್ ಒಟ್ಟಾಗಿ ನಟಿಸುತ್ತಿರುವ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.

ರಜನಿಕಾಂತ್ ಜತೆ ನಟಿಸುವುದು ನಿಜಕ್ಕೂ ಉತ್ತಮ ಅವಕಾಶ. ಈ ಚಿತ್ರದಲ್ಲಿ ಅವರ ಜತೆ ತೆರೆ ಹಂಚಿಕೊಳ್ಳುತ್ತಿರುವುದು ಖುಷಿ ನೀಡಿದೆ ಎಂದು ಹೇಳಿಕೊಂಡಿದ್ದಾರೆ ಶಿವಣ್ಣ.