Wednesday, September 9, 2026

BDA Apartments

Home Cinema ಇಂದು ‘ದ್ರೋಣ’ನ ರೂಪದಲ್ಲಿ ಥೀಯೇಟರ್’ಗೆ ಶಿವಣ್ಣ ಎಂಟ್ರಿ

ಇಂದು ‘ದ್ರೋಣ’ನ ರೂಪದಲ್ಲಿ ಥೀಯೇಟರ್’ಗೆ ಶಿವಣ್ಣ ಎಂಟ್ರಿ

ಬೆಂಗಳೂರು, ಮಾರ್ಚ್ 06, 2020 (www.justkannada.in): ಶಿವರಾಜ್ ಕುಮಾರ್ ಅಭಿನಯದ ‘ದ್ರೋಣ’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಇದಲ್ಲದೆ, ಈ ದಿನ ಬಿಡುಗಡೆಯಾಗುತ್ತಿರುವ ಸಿನಿಮಾಗಳಲ್ಲಿ ನಿರೀಕ್ಷೆ ಹುಟ್ಟಿಸಿರುವ ಒಂದು ಸಿನಿಮಾ ಎಂದರೆ ಪ್ರಮೋದ್ ಶೆಟ್ಟಿ ಅಭಿನಯದ ‘ಒಂದು ಶಿಕಾರಿಯ ಕತೆ’. ಇದಲ್ಲದೆ ಕಾಲೇಜ್ ಕುಮಾರ್, ಮದುವೆ ಮಾಡ್ರೀ ಸರಿಹೋಗ್ತಾರೆ, ಮೈ ನೇಮ್ ಈಸ್ ರಾಜಾ, ಸಿನಿಮಾಗಳೂ ಬಿಡುಗಡೆಯಾಗುತ್ತಿದೆ.

ಶಿವಣ್ಣ ಸಿನಿಮಾಗಳು ನಿರ್ಮಾಪಕರಿಗೆ ಯಾವತ್ತೂ ಮೋಸ ಮಾಡಲ್ಲ ಎಂಬ ನಂಬಿಕೆಯಿದೆ. ಹೀಗಾಗಿ ಈ ಸಿನಿಮಾವೂ ನಿರ್ಮಾಪಕರಿಗೆ ನಷ್ಟ ಮಾಡಲ್ಲ ಎಂಬ ನಂಬಿಕೆಯಲ್ಲಿ ಚಿತ್ರತಂಡವಿದೆ. ಪ್ರಮೋದ್ ಚಕ್ರವರ್ತಿ ಈ ಸಿನಿಮಾದ ನಿರ್ದೇಶಕರು.