ಬೆಂಗಳೂರು,ಏಪ್ರಿಲ್,11,2025 (www.justkannada.in): ಇಂದು ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆಯಾಗುತ್ತಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಶಿವರಾಜ್ ತಂಗಡಗಿ, ಜಾತಿ ಗಣತಿ ವರದಿ ಬಗ್ಗೆ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಇದು ಜಾತಿಗಣತಿ ಅಲ್ಲ ಸಾಮಾಜಿಕ ಆರ್ಥಿಕ ಸಮೀಕ್ಷೆ. ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ಬಳಿಕ ಟ್ರಜೋರಿಯಲ್ಲಿ ಇಟ್ಟಿದ್ದವು. ವರದಿಯಲ್ಲಿ ಏನಿದೆ ಅಂತಾ ಯಾರಿಗೂ ಗೊತ್ತಿಲ್ಲ. ಜಾತಿಗಣತಿ ವರದಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ ಎಂದರು.
ವರದಿ ಬಗ್ಗೆ ಸಂಪುಟದಲ್ಲಿ ಚರ್ಚೆಯಾದ ಬಳಿಕ ಮಾತನಾಡುತ್ತೇನೆ ಈಗ ಬರುತ್ತಿರುವ ಅಂಕಿ ಅಂಶಗಳು ಊಹಾಪೋಹಗಳು. ವರದಿ ಬಗ್ಗೆ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಇದು ಜನರ ಸಮೀಕ್ಷೆ ಜಾತಿ ಸಮೀಕ್ಷೆ ಅಲ್ಲ ಎಂದರು.
Key words: caste census, report, Minister, Shivaraj Thangadgi