ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ‘ಭಜರಂಗಿ-2’ ಚಿತ್ರವನ್ನು ಅಪ್ಪುಗೆ ಅರ್ಪಿಸಿದ ಶಿವಣ್ಣ

ಬೆಂಗಳೂರು, ಡಿಸೆಂಬರ್ 12, 2021 (www.justkannada.in): ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಭಜರಂಗಿ-2 ಸಿನಿಮಾವನ್ನು ಶಿವಣ್ಣ ಅವರು ಅಪ್ಪುಗೆ ಅರ್ಪಿಸಿದ್ದಾರೆ.

ಅಪ್ಪು‌ ನಿಧನಕ್ಕೂ ಮುನ್ನ ಭಜರಂಗಿ-2 ರಿಲೀಸ್ ಗೆ ವಿಷ್ ಮಾಡಿದ್ದರು. ಅಲ್ಲದೇ ಸಿನಿಮಾ ರಿಲೀಸ್ ಬಳಿಕ ಡಿಸ್ಟ್ರಿಬ್ಯೂಟರ್ ಬಳಿ ಮಾಹಿತಿ ಪಡೆದಿದ್ದರು.

ಅಪ್ಪು ಎಡಿಟಿಂಗ್ ರೂಮ್ ನಲ್ಲಿ ಭಜರಂಗಿ-2 ಸಿನಿಮಾ ಎಡಿಟ್ ಆಗಿತ್ತು. ಬಹಳಷ್ಟು ಸರಿ ಸಿನಿಮಾ ನೋಡಿ‌ ಅಪ್ಪು‌ ಮೆಚ್ಚಿಕೊಂಡಿದ್ದರು. ಇದೀಗ ಆ ಚಿತ್ರ ಒಟಿಟಿ ಪ್ಲಾಟ್ ಫಾರಂನಲ್ಲಿ ಬಿಡುಗಡೆಯಾಗುತ್ತಿದೆ.

ಇದೇ ತಿಂಗಳು 23 ರಂದು ಜೀ5 ಆ್ಯಪ್ ನಲ್ಲಿ ಭಜರಂಗಿ-2 ಅಬ್ಬರಿಸಲಿದೆ. ನಿರ್ಮಾಪಕ ಜಯಣ್ಣ-ಭೋಗಣ್ಣ ಭಜರಂಗಿ-2 ಸಿನಿಮಾವನ್ನು ಅದ್ಧೂರಿಯಾಗಿ ತಯಾರಿಸಿದ್ದರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್ ಮೂಡಿ ಬಂದ ಸಿನಿಮಾ ಭಜರಂಗಿ-2 ಥಿಯೇಟರ್ ನಲ್ಲೂ ಮೋಡಿ ಮಾಡಿತ್ತು.