ತುಂಗಾ ಜಲಾಶಯ ಭರ್ತಿ: 21 ಗೇಟ್ ಮೂಲಕ ನೀರು ಹೊರಕ್ಕೆ.

ಶಿವಮೊಗ್ಗ,ಜೂನ್,14,2021(www.justkannada.in):  ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಶಿವಮೊಗ್ಗ ತಾಲ್ಲೂಕಿನ ಗಾಜನೂರು ತುಂಗಾ ಜಲಾಶಯ ಭರ್ತಿಯಾಗಿದ್ದು, ಈ ಹಿನ್ನೆಲೆ ನೀರನ್ನ ಹೊರಕ್ಕೆ ಬೀಡಲಾಗುತ್ತಿದೆ.jk

ಕಳೆದ ಮೂರ್ನಾಲ್ಕು ದಿನಗಳಿಂದ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಜಲಾಶಯಕ್ಕೆ ನೀರು ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯದಲ್ಲಿ ನ 22 ಗೇಟುಗಳ ಪೈಕಿ 21 ಗೇಟುಗಳನ್ನು ತೆರೆದು ನೀರನ್ನು ಬಿಡಲಾಗುತ್ತಿದೆ.

ತುಂಗಾ ಜಲಾಶಯದಲ್ಲಿ 3.24 ಟಿಎಂಸಿ ನೀರು ಸಾಮರ್ಥ್ಯ ಹೊಂದಿದ್ದು 2.411 ಟಿಎಂಸಿ ನೀರಿದೆ. 3774 ಕ್ಯೂಸೆಕ್ ಒಳಹರಿವು ಇದೆ. ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನೀರನ್ನು ಹೊರ ಬಿಡಲಾಗಿದೆ. 21 ಗೇಟ್ ಗಳ ಮೂಲಕ ನದಿಗಳಿಗೆ ನೀರು ಬಿಡಲಾಗುತ್ತಿದೆ.

Key words: shivamogga- Tunga dam- filling-Water -out