ಈಗಾಗಲೇ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡಲು ತೀರ್ಮಾನ : ಆಶ್ರಯ ಸಮಿತಿಯ ಕಟ್ಟಡ ಉದ್ಘಾಟಿಸಿದ ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ,ಅಕ್ಟೋಬರ್,28,2020(www.justkannada.in) : ರಾಜ್ಯದ ಯಾವುದೇ ಗ್ರಾಮೀಣ ಪ್ರದೇಶ ಮತ್ತು ನಗರಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಜಾಗದಲ್ಲಿ ಯಾರು ಮನೆಗಳನ್ನ ಈಗಾಗಲೇ ಕಟ್ಟಿಕೊಂಡಿದಾರೆ. ಅವರೆಲ್ಲರಿಗೆ ಅಲ್ಲಿನೇ ಹಕ್ಕು ಪತ್ರ ನೀಡುವ ತೀರ್ಮಾನವನ್ನ ಈಗಾಗಲೇ ರಾಜ್ಯದಲ್ಲಿ ತೆಗೆದುಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಎಲ್ಲವೂ ನಡೆಯುತ್ತಿದೆ ಎಂದು ಗ್ರಾಮೀಣಾಭೀವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪರವರು ತಿಳಿಸಿದರು.shivamogga-minister-ks-eshwarappa-inaugurated-building-shelter-committee

ಆಶ್ರಯ ಸಮಿತಿಯ ಕಟ್ಟಡ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ,  ಇಡೀ ರಾಜ್ಯದಲ್ಲಿ ಆಶ್ರಯ ಸಮಿತಿಗಳನ್ನು ಮಾಡಿ ಭೂಮಿ ಖರೀದಿಸಲಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾದ ಸಬ್ಸಿಡಿ ಕೊಟ್ಟು ಫಲಾನುಭವಿಗಳಿಂದ ಕೂಡ ಹಣ ತೆಗೆದುಕೊಂಡು ಬ್ಯಾಂಕ್ ಸಾಲ ಕೂಡ ಕೊಡಿಸಿ ಕಡು ಬಡವರಿಗೆ ಮನೆಗಳನ್ನು ಕಟ್ಟಿಕೊಡಬೇಕೆಂಬ ವಿಶೇಷವಾದ ಯೋಜನೆಯೇ ಈ ಆಶ್ರಯ ಯೋಜನೆಯಾಗಿದೆ

ಈ ಆಶ್ರಯ ಯೋಜನೆ ಮುಖಾಂತರ ಶಿವಮೊಗ್ಗದ ವಿರುಪನಕೊಪ್ಪದಲ್ಲಿ ಅಡಿಕೆ ಮಂಡಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಸುಮಾರು 675 ಮನೆಗಳನ್ನು ಈಗಾಗಲೇ ನಿರ್ಮಿಸಿಕೊಡಲಾಗಿದೆ. ಅವರುಗಳು ಅಲ್ಲಿಯೇ ವಾಸ ಮಾಡುತ್ತಿದ್ದಾರೆ. ಭೊಮ್ಮನಕಟ್ಟೆ ಭಾಗದಲ್ಲೂ ಕೂಡ ನಿವೇಶನಗಳನ್ನು ಮತ್ತು ಮನೆಗಳನ್ನು ನೀಡಲಾಗಿದ್ದು ಅಲ್ಲಿಯೂ ಕೂಡ ಒಂದು ಹಂತಕ್ಕೆ ಬಂದಿದೆ ಎಂದರು.shivamogga-minister-ks-eshwarappa-inaugurated-building-shelter-committee

ಈ ಯೋಜನೆಯ ಸದುಪಯೋಗವನ್ನು ಅರ್ಹರಿಗೆ  ನೀಡಿ ಅವರು ಬದುಕು ಹಸನಾಗುವಂತೆ ಮಾಡುವುದು ನಮ್ಮ ಸ್ಥಳೀಯ ಸಂಸ್ಥೆಗಳು ಮತ್ತು ಅಧಿಕಾರಿಗಳ ಕರ್ತವ್ಯ ಎಂದು ಗ್ರಾಮೀಣಾಭೀವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪರವರು ತಿಳಿಸಿದರು.

Key words: shivamogga- Minister- KS Eshwarappa- inaugurated – building – shelter committee