ಶಿವಮೊಗ್ಗ ಗಲಾಟೆ ಪೂರ್ವನಿಯೋಜಿತ ಕೃತ್ಯ: ಸಚಿವ ರಾಮಲಿಂಗರೆಡ್ಡಿ ಕ್ಷಮೆಯಾಚಿಸಲಿ- ಎಂ.ಪಿ ರೇಣುಕಾಚಾರ್ಯ ಆಗ್ರಹ.

ದಾವಣಗೆರೆ,ಅಕ್ಟೋಬರ್,5,2023(www.justkannada.in):  ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ, ಗಲಭೆಯು ಪೂರ್ವನಿಯೋಜಿತ ಕೃತ್ಯವಾಗಿದೆ ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂ,ಪಿ ರೇಣುಕಾಚಾರ್ಯ, ಹಿಂದೂಗಳು ಇಂತಹ ಕೃತ್ಯವೆಸಗಲ್ಲ. ಸಚಿವ ರಾಮಲಿಂಗರೆಡ್ಡಿ ಕ್ಷಮೆಯಾಚಿಸಬೇಕು.  ದೇವರಲ್ಲಿ ದುಷ್ಟ ಸಂಹಾರಕ್ಕೆ ಆಯುಧವಿರುತ್ತದೆ. ಆದರೆ  ಮುಸ್ಲಿಮರು ರ್ಯಾಲಿ ವೇಳೆ ತಲ್ವಾರ್ ಪ್ರದರ್ಶಿಸಿದ್ರು ತಲ್ವಾರ್ ಪ್ರದರ್ಶಿಸಿರುವುದು ಯಾವುದರ ಸಂಕೇತ ಎಂದು ಕಿಡಿಕಾರಿದರು.

ಗಲಭೆಕೋರರನ್ನ ಬಂಧಿಸಿದ್ರೆ ಸಾಲಲ್ಲ.  ಪುಂಡರನ್ನ ಎನ್ ಕೌಂಟರ್ ಮಾಡಬೇಕು. ಪ್ರಕರಣ ಕುರಿತು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದರು.

Key words: Shimoga –riot- premeditated -act – MP Renukacharya