ರಾಜ್ಯದಲ್ಲಿ 24.15 ಉದ್ಯಮಗಳು ನೋಂದಣಿ: ಕರಕುಶಲ ವಸ್ತುಗಳ ಉತ್ತೇಜನಕ್ಕೆ ಕ್ರಮ- ಸಚಿವ ಶರಣ ಬಸಪ್ಪ ದರ್ಶನಾಪುರ

ಬೆಳಗಾವಿ,ಡಿಸೆಂಬರ್,17,2025 (www.justkannada.in): ರಾಜ್ಯದಲ್ಲಿ  24.15  ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ನೋಂದಣಿಯಾಗಿವೆ. ಕರಕುಶಲ ವಸ್ತುಗಳ ತಯಾರಿಕೆಗೆ ಉತ್ತೇಜನ ನೀಡಲು ಹಲವು ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ವಲಯ ಉದ್ಯಮಗಳ ಸಚಿವ ಸಚಿವ ಶರಣ ಬಸಪ್ಪ ದರ್ಶನಾಪುರ ತಿಳಿಸಿದರು.

ಇಂದು ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಕೆ.ಶಿವಕುಮಾರ್  ಅವರು, ರಾಜ್ಯದಲ್ಲಿರುವ ಸಣ್ಣ ಕೈಗಾರಿಕೆಗಳ ಸಂಖ್ಯೆ  ಬಗ್ಗೆ ಮಾಹಿತಿ ಒದಗಿಸುವಂತೆ ಕೋರಿದರು.

ಇದಕ್ಕೆ ಉತ್ತರಿಸಿದ ಸಚಿವ ಶರಣಬಸಪ್ಪ ದರ್ಶನಾಪುರ, ರಾಜ್ಯದಲ್ಲಿ ಜುಲೈ 2020 ರಿಂದ ಎಸ್.ಎಂ.ಎಂ.ಇ ಉದ್ಯಮಗಳ ನೊಂದಣಿಯನ್ನು ಭಾರತ ಸರ್ಕಾರದ ಉದ್ಯಮ್ ತಂತ್ರಾಂಶದಲ್ಲಿ ಮಾಡಲಾಗುತ್ತಿದೆ. ಭಾರತ ಸರ್ಕಾರದ ಉದ್ಯಮ್ ತಂತಾಂಶದಲ್ಲಿ ದಿನಾಂಕ: 27.11.2025 ರ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 24.15 ಲಕ್ಷ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ನೋಂದಣಿಯಾಗಿರುತ್ತವೆ. ಅವುಗಳ ಪೈಕಿ 23,83,812 ಸೂಕ್ಷ್ಮ ಮತ್ತು 31,346 ಸಣ್ಣ ಉದ್ಯಮಗಳು ನೊಂದಣಿಯಾಗಿರುತ್ತವೆ ಎಂದು ತಿಳಿಸಿದರು.

ಹಾಗೆಯೇ ವಿಶೇಷವಾಗಿ ಚನ್ನಪಟ್ಟಣ ಆಟಿಕೆಗಳು /ಇಳಕಲ್ ಸೀರೆಯಂತಹ ಸ್ಥಳೀಯ ಕರಕುಶಲ ವಸ್ತುಗಳನ್ನು ತಯಾರಿಸುವ ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಕ್ರಮಗಳೇನು ಎಂದು ಎಂಎಲ್ ಸಿ ಕೆ. ಶಿವಕುಮಾರ್ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಶರಣಬಸಪ್ಪ ದರ್ಶನಾಪುರ, ಚನ್ನಪಟ್ಟಣ ಆಟಿಕೆಗಳು ಹಾಗೂ ಕರಕುಶಲ ವಸ್ತುಗಳನ್ನು ತಯಾರಿಸಿ ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಹಾಗೂ ಸ್ಥಳಿಯರಿಗೆ ಉದ್ಯೋಗಾವಕಾಶ ಸೃಷ್ಠಿಸಲು ಕರಕುಶಲ ಕರ್ಮಿಗಳನ್ನು ಉತ್ತೇಜಿಸಲು ಕೇವಲ ಕರಕುಶಲ ವಸ್ತುಗಳ ತಯಾರಿಕೆಗಾಗಿ ಚನ್ನಪಟ್ಟಣ ತಾಲ್ಲೂಕಿನ ತಗಚಗೆರೆಯಲ್ಲಿ ಸುಮಾರು 14-27 ಎಕರೆ ವಿಸ್ತೀರ್ಣದಲ್ಲಿ ಪ್ರತ್ಯೇಕ  ವಸಾಹತುವನ್ನು 2009-10ನೇ ಸಾಲಿನಲ್ಲಿ ಸ್ಥಾಪಿಸಲಾಗಿರುತ್ತದೆ. ಸದರಿ ಕೈಗಾರಿಕಾ ವಸಾಹತುವಿನಲ್ಲಿ ಕರಕುಶಲ ಚಟುವಟಿಕೆಗಳು ಪ್ರಗತಿಯಲ್ಲಿವೆ ಎಂದರು.

ಹಾಗೆಯೇ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದಿಂದ ಅರಗು ಬಣ್ಣದ ಕಲಾ ಸಂಕೀರ್ಣ ಹಾಗೂ ಚನ್ನಪಟ್ಟಣದ ವ್ಯಾಪ್ತಿಯಲ್ಲಿ ನಿಗಮದಲ್ಲಿ ನೊಂದಾಯಿತ ಕರಕುಶಲಕರ್ಮಿಗಳು ತಯಾರಿಸಿದ ಚನ್ನಪಟ್ಟಣ ಆಟಿಕೆಗಳನ್ನು ಖರೀದಿಸಿ, ನಿಗಮದ ಕಾವೇರಿ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡಲು ಮಾರುಕಟ್ಟೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಸದನಕ್ಕೆ ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆಯೇ? ಎಂಬ ಪ್ರಶ್ನೆಗೆ, ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ನಿಗಮದ ಕಾರ್ಯವ್ಯಾಪ್ತಿಯಲ್ಲಿ ಬರುವ ಚನ್ನಪಟ್ಟಣದ ಆಟಿಕೆಗಳಿಗೆ ಭೌಗೋಳಿಕ ಗುರುತಿನ ಪ್ರಮಾಣ ಪತ್ರ (Gl Tag) ವನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ಪಡೆಯಲಾಗಿದೆ ಎಂದರು.

ಶ್ರೀಗಂಧದಲ್ಲಿ ಮಾಡುವ ಕರಕುಶಲಗಳು ಮತ್ತು ಬೀಟೆ ಮರಗಳ ಕರಕುಶಲಗಳು ತಯಾರಿಸುವ ಸಣ್ಣ ಸರ್ಕಾರ ಕೈಗೊಂಡಿರುವ ಉತ್ತೇಜನವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಶರಣಬಸಪ್ಪ ದರ್ಶನಾಪುರ ರಾಜ್ಯ ಸರ್ಕಾರದ ಕರಕುಶಲ  ಕಲೆಗೆ ಬೆಂಬಲ ಯೋಜನೆ ಯಡಿಯಲ್ಲಿ ಬಿಡುಗಡೆಯಾಗುವ ಅನುದಾನದಲ್ಲಿ ನಿಗಮವು ಶೇ.50 ರ ರಿಯಾಯಿತಿ ದರದಲ್ಲಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮದ ನೊಂದಾಯಿತ ಶ್ರೀಗಂಧ ಕರಕುಶಲಕರ್ಮಿಗಳಿಗೆ ಶ್ರೀಗಂಧದ ಕಚ್ಚಾಮಾಲನ್ನು ವಿತರಿಸಲಾಗುತ್ತಿದೆ ಹಾಗ ನಿಗಮದ ಕಲಾ ಸಂರ್ಕೀರ್ಣಗಳಿಂದ ಶ್ರೀಗಂಧ ನೊಂದಾಯಿತ ಕರಕುಶಲಕರ್ಮಿಗಳು ತಯಾರಿಸುವ  ತಯಾರಿಸುವ ಕಚ್ಚಾಮಾಲನ್ನು ಶ್ರೀಗಂಧದ ಕಲಾಕೃತಿಗಳನ್ನು ಖರೀದಿಸಿ, ನಿಗಮದ ಕಾವೇರಿ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡಿ, ಮಾರುಕಟ್ಟೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ನಿಗಮದ ಬಹು ಕಲಾ ಸಂಕೀರ್ಣ, ಮೈಸೂರಿನ ನೋಂದಾಯಿತ ಕರಕುಶಲಕರ್ಮಿಗಳು ತಯಾರಿಸಿದ ಬೀಟೆ ಮರ ಕಲಾಕೃತಿಗಳನ್ನು ಖರೀದಿಸಿ, ನಿಗಮದ ಕಾವೇರಿ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡಿ, ಮಾರುಕಟ್ಟೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

Key words: 24.15 industries, registered, Minister, Sharan Basappa Darshanapura