ದಾವಣಗೆರೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದುವರೆದಿದ್ರೆ ಅದಕ್ಕೆ ಶಾಮನೂರು ಶಿವಶಂಕರಪ್ಪ ಕಾರಣ- ಸಿಎಂ ಸಿದ್ದರಾಮಯ್ಯ

ಬೆಳಗಾವಿ,ಡಿಸೆಂಬರ್,15,2025 (www.justkannada.in): ಕಾಂಗ್ರೆಸ್ ಹಿರಿಯ ನಾಯಕ ಶಾಸಕ ಶಾಮನೂರು ಶಿವಶಂಕರಪ್ಪ ನಿನ್ನೆ ನಿಧನರಾಗಿದ್ದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಇಂದು ವಿಧಾನ ಮಂಡಲ ಚಳಿಗಾಲ ಅಧಿವೇಶನದ ಉಭಯ ಸದನಗಳಲ್ಲಿ ಶಾಮನೂರು ಶಿವಶಂಕರಪ್ಪ ನಿಧನಕ್ಕೆ  ಸಂತಾಪ ಸೂಚಿಸಲಾಯಿತು.  ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಾಮನೂರು ಶಂಕರಪ್ಪ ದೇಶದಲ್ಲೇ ಹಿರಿಯ ನಾಯಕ.  ತಮ್ಮ 63ನೇ ವಯಸ್ಸಿನಲ್ಲಿ ಶಾಸಕರಾದರು 1994 ರಲ್ಲಿ ಶಾಸಕರಾಗಿ ಆಯ್ಕೆಯಾದರು.  6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಒಮ್ಮೆ ಸಂಸದರಾಗಿದ್ದರು. ದಾವಣಗೆರೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದಿದ್ದರೆ ಅದಕ್ಕೆ ಶಾಮನೂರು ಶಿವಶಂಕರಪ್ಪ ಕಾರಣ ಎಂದರು.

ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯನ್ನ ವಿದ್ಯಕಾಶಿ ಮಾಡಿದ್ದಾರೆ.  ಎಲ್ಲರ ಜೊತೆಗೂ ಸ್ನೇಹದಿಂದ ಇದ್ದರು ಶಾಮನೂರು ಅಜಾತಶತ್ರು ನಾನು ದಾವಣಗೆರೆಗೆ ಹೋದಗೆಲ್ಲಾ ಮನೆಗೆ ಊಟಕ್ಕೆ ಕರೆಯುತ್ತಿದ್ದರು.  ಅವರ ಜಾಗದಲ್ಲೇ ನನ್ನ ಹುಟ್ಟುಹಬ್ಬದ ಕಾರ್ಯಕ್ರಮ ಮಾಡಿದ್ದು.  ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: Shamanur Shivashankarappa, death, Condolences, CM Siddaramaiah