ಕಿಚ್ಚ ‘ಪೈಲ್ವಾನ್’ಗೆ ಶಾರುಖ್ ಖಾನ್ ಗ್ರಾಫಿಕ್ಸ್ ಸಾಥ್

ಬೆಂಗಳೂರು, ಜೂನ್ 22, 2019 (www.justkannada.in): ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಪೈಲ್ವಾನ್ ಅಖಾಡಕ್ಕೆ ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಕೂಡ ಎಂಟ್ರಿ ಕೊಟ್ಟಿದ್ದಾರೆ.

ಅಂದಹಾಗೆ ಶಾರುಖ್ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಆದರೆ ಚಿತ್ರದ ಗ್ರಾಫಿಕ್ ಹೊಣೆಯನ್ನು ಶಾರೂಖ್ ಒಡೆತನದ ರೆಡ್ ಚಿಲ್ಲಿ ಎಂಟರ್ಟೈನ್ಮೆಂಟ್ ಸಂಸ್ಥೆ ನೋಡಿಕೊಳ್ಳಲಿದೆ.

ಪೈಲ್ವಾನ್ ನಲ್ಲಿ ಅದ್ಭುತ ಗ್ರಾಫಿಕ್ಸ್ ಗಳು ಇರುತ್ತವೆ. ತಮ್ಮ ಸಂಸ್ಥೆಯ ಮೂಲಕ ಪೈಲ್ವಾನ್ ಗ್ರಾಫಿಕ್ಸ್ ಗಳನ್ನು ಅದ್ಧೂರಿಯಾಗಿ ಮಾಡಿಸಿ ಕೊಡಲು ಮುಂದಾಗುವ ಮೂಲಕ ಶಾರೂಖ್ ಪೈಲ್ವಾನ್ ತಂಡದೊಂದಿಗೆ ಕೈ ಜೋಡಿಸಿದ್ದಾರೆ.