ಕೇರಳಾ ಯುವಕರಿಂದ ಕಾಸರಗೂಡಿನ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ..?

ಬೆಂಗಳೂರು,ಜ,5,2020(www.justkannada.in):  ಕಾಸರಗೂಡಿನ ಯುವತಿ ಮೇಲೆ ಕೇರಳಾದ ಇಬ್ಬರು ಯುವಕರು ಅತ್ಯಾಚಾರವೆಸಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಯುವತಿಗೆ ಬೆದರಿಕೆ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಕಾಸರಗೋಡಿನ ಯುವತಿ ಮೇಲೆ ಅತ್ಯಾಚಾರವೆಸಗಿ ಅದನ್ನ ವಿಡಿಯೋ ಮಾಡಿ ಮಾನಸಿಕ ಹಿಂಸೆ ಕೊಡುವುದರ  ಜತೆಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕೇರಳಾ ಯುವಕರು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಸಂತ್ರಸ್ತ ಯುವತಿ ಜತೆ ತೆರಳಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲು ಸಂಸದೆ ಶೋಭ ಕರಂದ್ಲಾಜೆ  ಮುಂದಾಗಿದ್ದಾರೆ.

ಇನ್ನು ಕಮಿಷನರ್ ಭೇಟಿಗೂ ಮುನ್ನ ಸಂತ್ರಸ್ತ ಯುವತಿ ಜತೆ ಸಂಸದೆ ಶೋಭಾ ಕರಂದ್ಲಾಜೆ  ಸಿಎಂ ಬಿಎಸ್ ಯಡಿಯೂರಪ್ಪರನ್ನ ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ.

ನಂತರ ಮಾತನಾಡಿರುವ ಸಂಸದೆ ಶೋಭಾಕರಂದ್ಲಾಜೆ, ಕೇರಳಾ ಯುವಕರು ಯುವತಿ ಮೇಲೆ ಅತ್ಯಾಚಾರವೆಸಗಿ ಅದನ್ನ ವಿಡಿಯೋ ಮಾಡಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಯುವತಿಗೆ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ.

Key words: Sexual harassment –Kasaragud –girl-  Kerala youth- MP shobha karandlaje- meet –cm bs yeddyurappa