ಗಾಯಗೊಂಡ ಶ್ವಾನ ರಕ್ಷಣೆಗೆ ಮುಂದಾದ ಯುವತಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಅಂದರ್

ಬೆಂಗಳೂರು, ಸೆಪ್ಟೆಂಬರ್​ 15,2025 (www.justkannada.in): ಗಾಯಗೊಂಡಿದ್ದ  ಶ್ವಾನ ರಕ್ಷಣೆಗೆ ಮುಂದಾಗಿದ್ದ ಯುವತಿಗೆ  ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪದ ಮೇಲೆ ಆರೋಪಿಯನ್ನ ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್ ಬಂಧಿತ ಆರೋಪಿ. ಘಟನೆಗೆ ಸಂಬಂಧಿಸಿದಂತೆ ಅಮೃತಹಳ್ಳಿ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಳು. ಇದೀಗ  ಆರೋಪಿ ಮಂಜುನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಸೆಪ್ಟಂಬರ್ 7ರಂದು ರಾತ್ರಿ  ವೇಳೆ ಜಕ್ಕೂರು ಮುಖ್ಯರಸ್ತೆಯಲ್ಲಿ ಶ್ವಾನ ಅಪಘಾತಕ್ಕೊಳಗಾಗಿ ಗಾಯಗೊಂಡಿತ್ತು. ಹೀಗಾಗಿ ಯುವತಿಯೊಬ್ಬರು ಕಾರು ನಿಲ್ಲಿಸಿ ಶ್ವಾನದ ರಕ್ಷಣೆಗೆ ಮುಂದಾಗಿದ್ದರು.  ಕೈಗೆ ರಕ್ತ ಆಗಿದ್ದರಿಂದ ಪೆಟ್ರೋಲ್ ಬಂಕ್ ಬಳಿ ಯುವತಿ ತೊಳೆದು ಕೊಳ್ಳುತ್ತಿದ್ದರು.

ಈ ವೇಳೆ ದ್ವಿಚಕ್ರವಾಹನದಲ್ಲಿ ಬಂದ ಆರೋಪಿ ಮಂಜುನಾಥ್ ಬ್ಯಾಡ್​ ಟಚ್ ಮಾಡಿ ತೆರಳಿದ್ದನು. ಸ್ವಲ್ಪ ಸಮಯದ  ಬಳಿಕ ಮತ್ತೆ ಬಂದು ಯುವತಿಯ ಖಾಸಗಿ ಅಂಗ ಮುಟ್ಟಿ ಪರಾರಿಯಾಗಿದ್ದ ಎನ್ನಲಾಗಿದೆ. ಇದೀಗ ಆರೋಪಿ ಮಂಜುನಾಥ್ ನನ್ನ ಬಂಧಿಸಲಾಗಿದೆ.

Key words: Sexual harassment, young woman,  Accused, arrest,