ನನ್ನ ವಿರುದ್ಧ ಪಿತೂರಿ: ಆರೋಪ ಮುಕ್ತನಾಗಿ ಬರುವೆ- ಮುರುಘಾಶ್ರೀಗಳಿಂದ ವಿಶ್ವಾಸ.

ಚಿತ್ರದುರ್ಗ,ಆಗಸ್ಟ್, 29,2022(www.justkannada.in):  ತಮ್ಮ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಕುರಿತು ಮಾತನಾಡಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶ್ರೀಗಳು, ಭಕ್ತಾದಿಗಳು ಆತಂಕಪಡಬೇಕಿಲ್ಲ. ನನ್ನ ವಿರುದ್ಧ ಪಿತೂರಿ ನಡೆಸಲಾಗಿದ್ದು, ಆರೋಪ ಮುಕ್ತನಾಗಿ ಬರುವೆ  ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಮುರುಘಾ ಶ್ರೀಗಳು, ಭಕ್ತಾದಿಗಳು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ಎದುರಾಗಿರುವ ಸಮಸ್ಯೆಯನ್ನ ಶಾಂತವಾಗಿ ಬಗೆಹರಿಸೋಣ. ನಿಮ್ಮೆಲ್ಲರ ಸಲುವಾಗಿ ನಾವು ಧೈರ್ಯವಾಗಿ ಇರುತ್ತೇವೆ.  ಇಷ್ಟು ದಿನ ಮಠದ ಒಳಗೆ ಪಿತೂರಿ ನಡೆಯುತ್ತಿತ್ತು. ಈಗ ಹೊರಗೆ ಪಿತೂರಿ ನಡೆಯುತ್ತಿದೆ  ಪ್ರತಿ ಸಮಸ್ಯೆಗೂ ಒಂದು ಅಂತ್ಯ ಇರುತ್ತೆ.

ನಾವು ಈ ನೆಲದ ಕಾನೂನನ್ನು ಗೌರವಿಸಬೇಕು. ಆ ಕಾನೂನನ್ನು ಗೌರವಿಸೋ ಮಠಾಧೀಶರಾಗಿದ್ದೇವೆ. ಆ ಗೌರವವನ್ನು ನಾನು ಕೂಡ ಮಾಡುತ್ತೇನೆ. ಕಾನೂನು ಗೌರವಿಸುತ್ತಾ ಪ್ರಕರಣ ಸಂಬಂಧದ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಫಲಾಯನವಾದ ಇಲ್ಲ ಎಂದು ಮುರುಘಾ ಶ್ರೀಗಳು ಹೇಳಿದರು.

ಹಾಗೆಯೇ ಭಕ್ತಾದಿಗಳು ಯಾವುದೇ ರೀತಿಯ ಊಹಾಪೋಹಗಳು, ಗಾಳಿ ಸುದ್ದಿಗಳನ್ನು ನಂಬಬಾರದು. ನಾವುಗಳು ನ್ಯಾಯದ ಸ್ಥಾನದಲ್ಲಿದ್ದೇವೆ. ಮುರುಘಾ ಮಠ ಒಂದಾನೊಂದು ಕಾಲದಲ್ಲಿ ಚಲಿಸುವ ನ್ಯಾಯಾಲಯವಾಗಿ ಕಾರ್ಯ ಮಾಡಿದೆ. ಎಲ್ಲಾ ವರ್ಗದವರಿಗೂ ಮಠವು ಪ್ರೀತಿಯಿಂದ ಅಕ್ಕರೆಯಿಂದ ನೋಡಿಕೊಂಡು ಬಂದಿದೆ. ಏನೋ ಅಹಿತಕರ ಘಟನೆ ನಡೆದಿದೆ. ನಾವು ಅದರಿಂದ ಹೊರಗಡೆ ಬಂದೇ ಬರುತ್ತೇವೆ ಎಂದು ಮುರುಘಾ ಶ್ರೀಗಳು ತಿಳಿಸಿದರು.

Key words: sexual Harassament-chithradurga-Murughashri-reaction

ENGLISH SUMMARY…

It is a conspiracy against me: I will prove them wrong – Murughashri exudes confidence
Chitradurga, August 29, 2022 (www.justkannada.in): Responding to the allegations of sexual harassment against the girl students of the hostel, Shivamurthy Swamiji of the Muruga Math, Chitradurga said that it is a conspiracy against him by some vested interests and he would emerge clean.
Speaking about the case against him, Murughasri requested his devotees and followers not to panic and lose trust. “Let us face the problem calmly. I am facing the situation bravely because of you people. A conspiracy was going on inside the math all these days, which has become public now. Every problem will have an ending,” he said.
“We have to respect the law of land. I am one among those who respect our law. I extend my complete cooperation in any investigation. I am not running away,” he observed.
He also urged the followers of the Math not to believe in rumors. “I am in a respectable position. The Muruga Math used to function as a mobile court once upon a time. Math has never been biased and has given equal importance to all, irrespective of caste and religion. Some unpleasant incident has taken place. I will come out of it,” he said.
Keywords: Murugha Shri/ conspiracy/ will prove them wrong