ಮುಂಬರುವ ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ನೀರಿನ ತೀವ್ರ ಕೊರತೆ ಉಂಟಾಗುವ ಸಾಧ್ಯತೆ: ವಿಜ್ಞಾನಿಗಳಿಂದ ಎಚ್ಚರಿಕೆ.

ಬೆಂಗಳೂರು, ಆಗಸ್ಟ್ 21, 2021 (www.justkannada.in): ವಾತಾವರಣ ಬದಲಾವಣೆಯ ಅಂತರ ಸರ್ಕಾರಿ ನಿಯೋಗದ (The Intergovernmental Panel on Climate Change (IPCC) ವರದಿಯ ಸಂಶೋಧನೆಗಳ ಕುರಿತು ಕಳವಳವನ್ನು ವ್ಯಕ್ತಪಡಿಸಿರುವ ಹವಾಮಾನ ಹಾಗೂ ಸಾಮಾಜಿಕ-ಆರ್ಥಿಕ ತಜ್ಞರು ಗುರುವಾರ, ಬೆಂಗಳೂರು ನಗರ ಮುಂಬರುವ ವರ್ಷಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವವನ್ನು ಎದುರಿಸಲಿದೆ ಎಂದು ಎಚ್ಚರಿಸಿದ್ದಾರೆ.

ಬೆಂಗಳೂರಿನ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್) ಆಯೋಜಿಸಿದ್ದ ‘ವಾತಾವರಣ ಬದಲಾವಣೆಗೆ ಪ್ರತಿಕ್ರಿಯೆ: ಕರ್ನಾಟಕ ಹಾಗೂ ಭಾರತ ಏನು ಮಾಡಬಹುದು?’ ಎಂಬ ವೆಬಿನಾರ್‌ನಲ್ಲಿ ಭಾಗವಹಿಸಿದ ಪ್ರೊ. ಕೃಷ್ಣರಾಜ್, ಪ್ರಾಧ್ಯಾಪಕರು (ಐಸೆಕ್) ಇವರು, ಅತೀ ಹೆಚ್ಚಿನ ಪ್ರಮಾಣದ ಇಂಗಾಲ ಆರ್ಥಿಕತೆ (carbon economy) ಸಮಸ್ಯೆಯನ್ನು ಎತ್ತಿ ತೋರಿಸುತ್ತಾ, ನಗರದಲ್ಲಿ ತಾಪಮಾನ 1 ಡಿಗ್ರಿ ಸೆಲ್ಷಿಯಸ್‌ನಷ್ಟು ಹೆಚ್ಚಳವಾಗಿದ್ದು, ಇದರಿಂದ ಜಿಡಿಪಿಯ ೫ ಪ್ರತಿಶತದಷ್ಟು ವೆಚ್ಚವಾಗಿದೆ ಎಂದು ವಿವರಿಸಿದರು.

“ಪರಿಸ್ಥಿತಿ ಇದೇ ರೀತಿ ಮುಂದುವರೆದು ತಾಪಮಾನ ಇದೇ ರೀತಿ ಬದಲಾಗುತ್ತಿದ್ದರೆ, ಮುಖ್ಯವಾಗಿ ಮಳೆ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗಿ ಕಾವೇರಿ ನದಿ ಪಾತ್ರದಲ್ಲಿ ನೀರಿನ ಕೊರತೆ ಎದುರಾಗಿ ಬೆಂಗಳೂರು ನಗರ ಮುಂಬರುವ ವರ್ಷಗಳಲ್ಲಿ ತೀವ್ರ ಕುಡಿಯುವ ನೀರಿನ ಅಭಾವವನ್ನು ಎದುರಿಸಬೇಕಾಗುತ್ತದೆ,” ಎಂದು ತಿಳಿಸಿದರು.

೨೦೩೦ರ ವೇಳೆಗೆ ಭಾರತವು ತನ್ನ ಅರಣ್ಯ ವ್ಯಾಪ್ತಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ  ಪ್ರಮಾಣವನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿದ್ದರೂ ಸಹ ವಾತಾವರಣ ಕೊರತೆಯ ಹವಾಮಾನ ಹಣಕಾಸಿನ ವ್ಯವಸ್ಥೆಯಿಂದಾಗಿ ಹವಾಮಾನದ ಗುರಿಯನ್ನು ಸಾಧಿಸಲು ತೊಡಕಾಗಬಹುದು. ಸೆಂಟರ್ ಫಾರ್ ಎಕಲಾಜಿಕಲ್ ಎಕನಾಮಿಕ್ಸ್ ಅಂಡ್ ನ್ಯಾಚುರಲ್ ರಿರ್ಸೋರ್ಸ್, ಐಸೆಕ್‌ ನ ಸಹಾಯಕ ಪ್ರಾಧ್ಯಾಪಕ ಬಾಲಸುಬ್ರಹ್ಮಣಿಯಂ ಅವರು, ಕರ್ನಾಟಕದಲ್ಲಿ ಶೇ.೬೫ರಷ್ಟು ಮನೆಗಳು ಹವಾಮಾನ ಹೆಚ್ಚಳದ ಪ್ರಭಾವವನ್ನು ಎದುರಿಸಲಿವೆ. “ಕರ್ನಾಟಕದಲ್ಲಿ ಜಾಗತಿಕ ತಾಪಮಾನದಿಂದಾಗಿ ಅತೀ ಹೆಚ್ಚಿನ ಪರಿಣಾಮವನ್ನು ಎದುರಿಸುವ ಸಂಭವವಿರುವ ಜನಸಂಖ್ಯೆಯ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿರಿಯ ನಾಗರಿಕರು ಮತ್ತು ಮಕ್ಕಳು,” ಸೇರಿದ್ದಾರೆ ಎಂದು ವಿವರಿಸಿದರು.

ಸೆಂಟರ್ ಫಾರ್ ರಿಸರ್ಚ್ ಇನ್ ಅರ್ಬನ್ ಅಫರ್ಸ್, ಐಸೆಕ್‌ ನ ಪ್ರಾಧ್ಯಾಪಕಿ ಕಲಾ ಎಸ್. ಶ್ರೀಧರ್ ಅವರು ಮಾತನಾಡುತ್ತಾ, ನಗರೀಕರಣದಿಂದಾಗಿ, ವಿಶ್ವ ಅಭಿವೃದ್ಧಿ ಸೂಚಕಗಳ ಸಮಯ ಸರಣಿ ದತ್ತಾಂಶವನ್ನು (time series data) ಬಳಸಿಕೊಂಡು ಜಾಗತಿಕ ತಾಪಮಾನ ಹೆಚ್ಚಳವಾಗುತ್ತದೆ ಎಂಬ ಸಿದ್ಧಾಂತವನ್ನು ಅಲ್ಲಗಳೆದರು. ಅವರ ಪ್ರಕಾರ, ನಗರೀಕರಣದಿಂದಾಗಿ ಕೃಷಿ ಆದಾಯದ ಮೇಲೆ ಯಾವುದೇ ರೀತಿ ಪರಿಣಾಮ ಉಂಟಾಗುವುದಿಲ್ಲ ಹಾಗೂ ವಾಸ್ತವದಲ್ಲಿ ಕೆಲವು ನಿರ್ಧಿಷ್ಟ ಉದಾಹರಣೆಗಳ ಪ್ರಕಾರ ನಗರೀಕರಣದಿಂದಾಗಿ ಕೃಷಿ ಆದಾಯದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದರು.

“ಹವಮಾನದಲ್ಲಾಗುತ್ತಿರುವ ಬದಲಾವಣೆಯನ್ನು ಕಡಿಮೆಗೊಳಿಸಲು ಇರುವ ಒಂದೇ ದಾರಿಯೆಂದರೆ ನವೀಕರಣಗೊಳಿಸಬಲ್ಲಂತಹ ಇಂಧನವನ್ನು ಹೆಚ್ಚು ಅವಲಂಭಿಸುವುದು ಹಾಗೂ ಸಾರ್ವಜನಿಕರನ್ನು ಹೆಚ್ಚು ಹೆಚ್ಚು ಸಾರ್ವಜನಿಕ ಸಾರಿಗೆಯ ಮೇಲೆ ಅವಲಂಭಿಸುವಂತೆ ಪ್ರೋತ್ಸಾಹಿಸುವ ಮೂಲಕ ವಾಹನಗಳಿಂದ ಹೊರಹೊಮ್ಮುತ್ತಿರುವ ರಾಸಾಯನಿಕಗಳ ಪ್ರಮಾಣವನ್ನು ಕಡಿಮೆಗೊಳಿಸುವುದು,” ಎಂದು ವಿವರಿಸಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Severe- shortage – water – Bangalore city – coming years- Warning – scientist