Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಕಟಾ ಕಟ್ ಅಂತೇಳಿ ದಲಿತರ ಹಣ ಲೂಟಿ ಹೊಡೆದಿದ್ದಾರೆ- ಸದನದಲ್ಲಿ ಆರ್.ಅಶೋಕ್ ಕಿಡಿ

ಕಟಾ ಕಟ್ ಅಂತೇಳಿ ದಲಿತರ ಹಣ ಲೂಟಿ ಹೊಡೆದಿದ್ದಾರೆ- ಸದನದಲ್ಲಿ ಆರ್.ಅಶೋಕ್ ಕಿಡಿ

ಬೆಂಗಳೂರು,ಜುಲೈ,15,2024 (www.justkannada.in): ರಾಜ್ಯ ವಿಧಾನ ಮಂಡಲ ಮುಂಗಾರು ಅಧಿವೇಶನ ಇಂದಿನಿಂದ  ಶುರುವಾಗಿದ್ದು ಈ ಮಧ್ಯೆ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿನ ಅಕ್ರಮ ಕುರಿತು ಸದನದಲ್ಲಿ ಪ್ರಸ್ತಾಪವಾಗಿದೆ.

ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ಕುರಿತು ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ , ಅಕ್ರಮದ ಬಗ್ಗೆ ನಾಗೇಂದ್ರ ಒಪ್ಪಿಕೊಂಡಿದ್ದಾರೆ. ದಲಿತರ ಹಣವನ್ನ ಲೂಟಿ ಹೊಡೆದಿದ್ದಾರೆ. ಕರ್ನಾಟಕ ಇತಿಹಾಸದಲ್ಲೇ ಇದು ದೊಡ್ಡ ಕಪ್ಪು ಚುಕ್ಕೆ ಎಂದು ಗುಡುಗಿದರು. ಕಟಾ ಕಟ್ ಅಂತೇಳಿ ದಲಿತರ ಹಣ ಲೂಟಿ ಹೊಡೆದಿದ್ದಾರೆ- ಸದನದಲ್ಲಿ ಆರ್.ಅಶೋಕ್ ಕಿಡಿ ...

ಕಟಾಕಟ್ ಅಂತೇಳಿ ನೂರಕ್ಕೆ ನೂರರಷ್ಟು ಲೂಟಿ ಮಾಡಿ್ದ್ದಾರೆ.  ನಿಗಮದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂಗೆ ಆಗಿದೆ.  ದಲಿತರ ಹಣ ಲೂಟಿ ಹೊಡೆದಿದ್ದಾರೆ. ಇತಿಹಾಸದಲ್ಲೇ ಯಾರೂ ದಲಿತರ ಹಣ ನುಂಗಿರಲಿಲ್ಲ . ವಾಲ್ಮೀಕಿ ನಿಗಮದ ಹಣ ಬೇರೆ ರಾಜ್ಯಕ್ಕೆ ಹೋಗಿದೆ ಎಂದು ಆರ್.ಅಶೋಕ್ ಹರಿಹಾಯ್ದರು.

ಆರ್ ಅಶೋಕ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಅಕ್ರಮದ ಬಗ್ಗೆ ನಾಗೇಂದ್ರ ಒಪ್ಪಿಕೊಂಡಿಲ್ಲ. ಹಣ ಲೂಟಿ ಹೊಡೆದಿದ್ದಾರೆ ಅನ್ನೋದು ಸರಿಯಲ್ಲ ಎಂದು ಕಿಡಿಕಾರಿದರು.

Key words: session, R. Ashok, Valmiki Corporation, Scam