ವಿಪಕ್ಷಗಳು ಸೋಲಿನ ಹತಾಶೆಯಿಂದ ಹೊರ ಬರಲಿ, ತಮ್ಮ ಜವಾಬ್ದಾರಿ ನಿಭಾಯಿಸಲಿ: ಪ್ರಧಾನಿ ಮೋದಿ

ನವದೆಹಲಿ,ಡಿಸೆಂಬರ್,1,2025  (www.justkannada.in): ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಿದ್ದು, ಈ ನಡುವೆ ವಿಪಕ್ಷಗಳು ಬಿಹಾರ ಸೋಲಿನ ಹತಾಶೆಯಿಂದ ಹೊರ ಬರಲಿ, ತಮ್ಮ ಜವಾಬ್ದಾರಿ ನಿಭಾಯಿಸಲಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ಬಿಹಾರ ಚುನಾವಣಾ ಫಲಿತಾಂಶದಿಂದ ವಿಪಕ್ಷಗಳಿಗೆ ನಿರಾಸೆಯಾಗಿದೆ.  ವಿರೋಧ ಪಕ್ಷಗಳು ಸೋಲಿನ ಹತಾಶೆಯಿಂದ ಹೊರಬರಬೇಕು.   ಡ್ರಾಮಾ ಮಾಡುವುದಕ್ಕೆ ಅದರದ್ದೇ ಆದ ಕೆಲ ಸ್ಥಳಗಳಿವೆ ಅಲ್ಲಿ ಅವರು ಡ್ರಾಮಾ ಮಾಡಲಿ ವಿಪಕ್ಷಗಳು ಸಹ ತಮ್ಮ ಜವಾಬ್ದಾರಿಯನ್ನ ನಿಭಾಯಿಸಬೇಕು.  ದೇಶದ ಅಭಿವೃದ್ದಿಗಾಗಿ ಸಕಾರಾತ್ಮಕ ಆಲೋಚನೆ ಮಾಡಲಿ ಎಂದರು.

ಸದನದಲ್ಲಿ ಹೊಸ ಸದಸ್ಯರಿಗೆ  ಮಾತನಾಡಲು ಅವಕಾಶ ಸಿಗಲಿ. ಕೇವಲ ಘೋಷಣೆ ಅಲ್ಲ ನೀತಿಗಳಿಂದ ಸದನಕ್ಕೆ ಬಲ ತುಂಬಬೇಕು ವಿಪಕ್ಷಗಳಿಗೆ ಸಲಹೆ ನೀಡಲು ನಾನು ಸಿದ್ದನಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.

Key words: Session, opposition parties, defeat, PM Modi