ಬೆಳಗಾವಿ,ಡಿಸೆಂಬರ್,16,2025 (www.justkannada.in): ಸಿಎಂ ಬದಲಾವಣೆ ವಿಚಾರ ಇದೀಗ ವಿಧಾನ ಮಂಡಲ ಅಧಿವೇಶನದಲ್ಲೂ ಪ್ರಸ್ತಾಪವಾಗಿದ್ದು ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಹೆಚ್.ಡಿ ರಂಗನಾಥ್ ಪ್ರಾಥಮಿಕ ಕೃಷಿಪತತಿನ ಸಹಕಾರಸಂಘಗಳಿಗೆ ಅನುದಾನ ಕುರಿತು ಪ್ರಸ್ತಾಪಿಸಿ ಅಕ್ರೋಶ ಭರಿತವಾಗಿ ಸಿಎಂ ಸಿದ್ದರಾಮಯ್ಯಗೆ ಪ್ರಶ್ನಿಸಿದರು. ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಮಧ್ಯಪ್ರವೇಶಿಸಿ ಬೇಕು ಅಂತಾನೆ ಹಾಗೆ ಕೇಳಿದ್ರಾ ಎಂದು ಕೆಣಕಿದರು. ಈ ಸಂದರ್ಭದಲ್ಲಿ ನನಗೇನು ಸಿಟ್ಟಿಲ್ಲ ನಾನು ಮಾತಾಡುವುದೇ ಹೀಗೆ ಎಂದು ಶಾಸಕ ರಂಗನಾಥ್ ಹೇಳಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೀವು ಉರಿಯುವ ಬೆಂಕಿಗೆ ಉಪ್ಪು ಹಾಕಬೇಡಿ ಎಂದರು. ಹಾಗಾದರೆ ಉರಿಯತ್ತಾ ಇದೆ ಅಂತಾ ಆಯ್ತಲ್ವಾ ಎಂದ ಅಶೋಕ್ ಮತ್ತೆ ಕುಟುಕಿದರು. ಆಗ ಅದು ಉರಿಯುತ್ತಾ ಇಲ್ಲ ಅದು ಗಾದೆ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ನಮ್ಮಲ್ಲಿ ಹೈಕಮಾಂಡ್ ಇದೆ. ಐದು ವರ್ಷ ಇರಿ ಅಂತಾ ರಾಜ್ಯದ ಜನರು ಆಶೀರ್ವಾದ ಮಾಡಿದ್ದಾರೆ ಜನ ಬಿಜೆಪಿಗೆ ಒಮ್ಮೆಯೂ ಆಶೀರ್ವಾದ ಮಾಡಿಲ್ಲ. 2028ಕ್ಕೆ ನಾವೇ ಅಧಿಕಾರಕಕೆ ಬರುತ್ತೇವೆ. ಈಗಲೂ ನಾನೇ ಸಿಎಂ ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ ಎಂದರು ಎಲ್ಲಿವರೆಗೂ ಹೈಕಮಾಡ್ ಹೇಳುತ್ತೋ ಅಲ್ಲಿ ತನಕ ಸಿಎಂ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
Key words: session, CM Siddaramaiah, R.Ashok, MLA, HD Ranganath







