ಒಂದು ತಿಂಗಳೂಳಗೆ ಸೇವೆ ಕಾಯಂ: ಗುತ್ತಿಗೆ ವೈದ್ಯರಿಗೆ ಆರೋಗ್ಯ ಸಚಿವ ಶ್ರೀರಾಮುಲು ಭರವಸೆ….

ಬೆಂಗಳೂರು,ಜು,8,2020(www.justkannada.in):  ತಮ್ಮ ಸೇವೆಯನ್ನ ಖಾಯಂ ಮಾಡುವಂತೆ ಆಗ್ರಹಿಸಿ ಇಂದು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದ ಗುತ್ತಿಗೆ ವೈದ್ಯರಿಗೆ  ಒಂದು ತಿಂಗಳೂಳಗೆ ಸೇವೆ ಖಾಯಂ ಗೊಳಿಸುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ.jk-logo-justkannada-logo

ತಮ್ಮ ಸೇವೆಯನ್ನ ಖಾಯಮಾತಿ ಮಾಡುವಂತೆ ಆಗ್ರಹಿಸಿ ಇಂದು ಗುತ್ತಿಗೆ ವೈದ್ಯರು ಕೆಲಸಕ್ಕೆ ಗೈರಾಗುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಸಚಿವ ಶ್ರೀರಾಮುಲು ಭೇಟಿ ನೀಡಿ ಗುತ್ತಿಗೆ ವೈದ್ಯರ ಬೇಡಿಕೆ ಆಲಿಸಿದರು. ಮೂರು ವರ್ಷಗಳಿಂದ ಸೇವೆ ಕಾಯಂ ಮಾಡುವುದಾಗಿ ಹೇಳಿತ್ತಾ ಬಂದಿದ್ದೀರಿ. ಆದರೆ ಸೇವೆ ಕಾಯಂಗೆ ಸಮಯ ನಿಗದಿ ಮಾಡಿಲ್ಲ. 15 ದಿನಗಳೊಳಗೆ ಸೇವೆ ಕಾಯಂ ಮಾಡಿ. ಎಂದು ಪ್ರತಿಭಟನಾನಿರತ ಗುತ್ತಿಗೆ ವೈದ್ಯರು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಒಂದು ತಿಂಗಳೊಳಗೆ 507 ಗುತ್ತಿಗೆ ವೈದ್ಯರ ಸೇವೆ ಕಾಯಂ ಮಾಡಲು ಸಿಎಂ ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ. ನಾಳೆ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಒಂದು ತಿಂಗಳೊಳಗೆ ಸೇವೆ ಕಾಯಂ ಮಾಡುವುದಾಗಿ ಭರವಸೆ ನೀಡಿದರು.service-permanent-health-minister-sriramulu-promises-contract-doctors

ಸಚಿವರು ಭರವಸೆ ನೀಡಿದ ಹಿನ್ನೆಲೆ,ಗುತ್ತಿಗೆ ವೈದ್ಯರು ಕರ್ತವ್ಯಕ್ಕೆ ಹಾಜರಾಗಲು ಒಪ್ಪಿಗೆ ಸೂಚಿಸಿದರು.

Key words: Service- Permanent – Health Minister -Sriramulu -promises -contract doctors.