ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿ ಟೀಕಿಸಿದ ಹಿರಿಯ ಕಾಂಗ್ರೆಸ್ ಶಾಸಕ

ಬೆಂಗಳೂರು,ಅಕ್ಟೋಬರ್,13,2025 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದ್ದು, ಯಾವುದೇ ಅಭಿವೃದ್ದಿಕಾರ್ಯಗಳು ನಡೆಯುತ್ತಿಲ್ಲ ಎಂದು ವಿಪಕ್ಷ ಬಿಜೆಪಿಯಿಂದ ಆರೋಪಗಳು ಈಗಾಗಲೇ ಕೇಳಿಬಂದಿವೆ. ಆದರೆ ಇದೀಗ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ವಪಕ್ಷದ ಹಿರಿಯನಾಯಕರೇ ಆದ ಆರ್.ವಿ ದೇಶಪಾಂಡೆ ಟೀಕಿಸಿದ್ದಾರೆ.

ಹೌದು, ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಶಾಸಕ ಆರ್.ವಿ ದೇಶಪಾಂಡೆ,  ಸರ್ಕಾರ ಜಾರಿಗೆ ತಂದಿರುವ ಯೋಜನೆ ಒಂದಾ ಎರಡಾ. ಉಚಿತ ಬಸ್ ಯೋಜನೆಯಿಂದ ಬರೀ ಮಹಿಳೆಯರೇ ಎಲ್ಲಿ ನೋಡಿದ್ರೂ ಬಸ್ ನಲ್ಲಿ ಮಹಿಳೆಯರೇ ಇರುತ್ತಾರೆ.  ಸರ್ಕಾರಿ ಬಸ್ ನ ಪರಿಸ್ಥಿತಿ ಬಗ್ಗೆ ಹೇಳೋದು ಬೇಡ ಯಾರಾದರೂ  4ಜನ ಗಂಡಸರು ಹೋಗೋದೇ ಕಷ್ಟ. ಇಂತಹ ಯೋಜನೆಗಳನ್ನ ಸಿದ್ದರಾಮಯ್ಯ ತಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ಈಗ 5 ಕೆಜಿ ಅಕ್ಕಿ ಬದಲು ತೊಗರಿ ಸೇರಿ ಬೇರೆ ದಿನಸಿ ಕೊಡಲು ನಿರ್ಧಾರ ಮಾಡಿದ್ದಾರೆ. ಸಿಎಂ ಏನೇನೋ ಮಾಡುತ್ತಾರೋ ನನಗೆ ಗೊತ್ತಿಲ್ಲ ಎಂದು ಶಾಸಕ ಆರ್.ವಿ ದೇಶಪಾಂಡೆ ಲೇವಡಿ ಮಾಡಿದರು.

Key words: Senior, Congress MLA ,criticizes, government, guarantee schemes