ಆ.30 ರಂದು ‘ಸುದ್ದಿಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಠಿಕೋನ’ ವಿಚಾರ ಸಂಕಿರಣ

ಚಿತ್ರದುರ್ಗ,ಆಗಸ್ಟ್,28,2025 (www.justkannada.in): ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಎಸ್.ಸಿ, ಎಸ್ ಟಿ ಪತ್ರಿಕಾ ಸಂಪಾದಕರ ಸಂಘ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 30 ರಂದು ‘ಸುದ್ದಿಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಠಿಕೋನ’ ಎಂಬ ಒಂದು ದಿನದ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಚಿತ್ರದುರ್ಗದ ಪತ್ರಕರ್ತರ ಭವನದ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಈ ವಿಚಾರಣ ಸಂಕಿರಣ ಆಯೋಜಿಸಲಾಗಿದ್ದು, ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಆಗಮಿಸಲಿದ್ದಾರೆ. ಗೋಷ್ಠಿ 1ರಲ್ಲಿ ಅಂಬೇಡ್ಕರ್ ಅವರ ಪತ್ರಿಕಾ ವೃತ್ತಿ ಬಗ್ಗೆ  ಶಿವಮೊಗ್ಗ ಟೆಲೆಕ್ಸ್ ದಿನಪತ್ರಿಕೆಯ ಸಂಪಾದಕ ರವಿಕುಮಾರ್ ಎನ್,  ಹಾಗೆಯೇ ‘ಪತ್ರಕರ್ತರಾಗಿ ಅಂಬೇಡ್ಕರ್ ಅವರ ಬರವಣಿಗೆಗಳ’ ಬಗ್ಗೆ ಸಾಮಾಜಿಕ ಚಿಂತಕ ವಿ.ಎಲ್ ನರಸಿಂಹಮೂರ್ತಿ  ತಿಳಿಸಿಕೊಡಲಿದ್ದಾರೆ.

ಗೋಷ್ಠಿ 2ರಲ್ಲಿ ಅಂಬೇಡ್ಕರ್ ದೃಷ್ಠಿಯಲ್ಲಿ ಲಿಂಗಸಮಾನತೆ ಬಗ್ಗೆ ಶಿವಮೊಗ್ಗದ  ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ಭಾರತಿದೇವಿ. ಪಿ ಅವರು ಮಾತನಾಡಲಿದ್ದು, ಪತ್ರಕರ್ತರಲ್ಲಿ ಸಾಮಾಜಿಕ ನ್ಯಾಯದ ಪ್ರಜ್ಞೆ ಬಗ್ಗೆ ಬೆಳಗಾವಿಯ ದಿ ಹಿಂದೂ ಹಿರಿಯ ಸಹಾಯಕ ಸಂಪಾದಕ ರಿಷಿಕೇಶ್ ಬಹದ್ದೂರು ದೇಸಾಯಿ ಚರ್ಚಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಡಿ. ಉಮಾಪತಿ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಉಪಸ್ಥಿತರಿರಲಿದ್ದಾರೆ.

Key words: Seminar, BR Ambedkar, Perspective, Media, August 30