ಕಾಟಾಚಾರಕ್ಕೆ ಗನ್ ಮ್ಯಾನ್ ನೀಡಿದ್ರೆ ಪ್ರಯೋಜನವಿಲ್ಲ- ಮಾಜಿ ಸಚಿವ ಯು.ಟಿ ಖಾದರ್…

ಮೈಸೂರು,ಮಾ,6,2020(www.justkannada.in): ತಮಗೆ ಜೀವ ಬೆದರಿಕೆ ಹಿನ್ನೆಲೆ ಕಾಟಾಚಾರಕ್ಕೆ ಗನ್ ಮ್ಯಾನ್ ನೀಡಿದರೇ ಪ್ರಯೋಜನವಿಲ್ಲ . ಭದ್ರತೆ ನೀಡುವಾಗ ಸಮಗ್ರವಾಗಿ ಭದ್ರೆತೆ ನೀಡಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಮಾಜಿ ಸಚಿವ ಯುಟಿ ಖಾದರ್,  ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕರೆ ಮಾಡಿ ತಿಳಿಸಿದ್ದರು. ಅದಕ್ಕಾಗಿ ತಾವು ಗೃಹ ಸಚಿವರಿಗೆ ಧನ್ಯವಾದ ತಿಳಿಸಿದ್ದೇನೆ  ನಾನು ಜನಪ್ರತಿನಿಧಿ. ಆದರೆ ಜನಸಾಮಾನ್ಯರಿಗೆ ಈ ರೀತಿ ಆದರೆ ಯಾರು ಜವಾಬ್ದಾರಿ. ಭದ್ರತೆ ಕೇವಲ ಹೆಸರಿಗೆ ಮಾತ್ರ ಆಗಬಾರದು. ಕೂಲಿಕಾರ್ಮಿಕನ ಜೀವಕ್ಕೂ ಬೆಲೆ ಇದೆ. ನಿರ್ಬಯವಾಗಿ ಎಲ್ಲರೂ ಜೀವಿಸುಂತಾಗಬೇಕು. ಹೀಗಾಗಿ ಕಾಟಾಚಾರಕ್ಕೆ ಗನ್ ಮ್ಯಾನ್ ನೀಡಿದರೇ ಪ್ರಯೋಜನವಿಲ್ಲ ಸಮಗ್ರ ಭದ್ರತೆ ನೀಡಲಿ ಆಗಂತ ಝೆಡ್ ಪ್ಲೆಸ್ ಮಾದರಿ ಭದ್ರತೆ ನೀಡಿ ಅಂತಾ ಕೇಳಿಲ್ಲ ಎಂದು ಹೇಳಿದರು.

ಭದ್ರತೆ ಪಡೆಯಲು ನನಗೇನು ಅಭ್ಯಂತರವಿಲ್ಲ. ಪರಿಸ್ಥಿತಿ ಅವಲೋಕಿಸಿ ಸೂಕ್ತ ಭದ್ರತೆ ನೀಡಲಿ ಎಂದು ಯುಟಿ ಖಾದರ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Key words: security – no use– gunmanship-Former Minister -UT Khader.