2ನೇ ಡೋಸ್ ಲಸಿಕೆ ಪಡೆದ ಸುತ್ತೂರು ಶ್ರೀಗಳು: 3ನೇ ಅಲೆ ಎದುರಿಸಲು ಜೆಎಸ್‌ ಎಸ್ ಆಸ್ಪತ್ರೆಯಲ್ಲಿ ಸೌಲಭ್ಯ ಹೆಚ್ಚಳ…

ಮೈಸೂರು,ಮೇ,17,2021(www.justkannada.in): ಮೈಸೂರಿನ ಜೆ ಎಸ್ ಎಸ್ ಎಸ್ ಆಸ್ಪತ್ರೆಯಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಕೊರೋನಾ ಲಸಿಕೆ 2ನೇ ಡೋಸ್ ಪಡೆದರು.jk

ಕೋವ್ಯಾಕ್ಸಿನ್ ಲಸಿಕೆ ಪಡೆದ ನಂತರ  ಸುತ್ತೂರು ಶ್ರೀಗಳು ಜೆಎಸ್‌ಎಸ್ ಆಸ್ಪತ್ರೆಯ ಅಧಿಕಾರಿಗಳ ಜತೆ ಸಭೆ ನಡೆಸಿ ಆಸ್ಪತ್ರೆಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಬಳಿಕ ಕೋವಿಡ್ ಕೇರ್ ಸೆಂಟರ್ ರೋಗಿಗಳಿಗೆ ಸುತ್ತೂರು ಶ್ರೀಗಳು ಸಾಂತ್ವನ ಹೇಳಿದರು.

ಜೆಎಸ್‌ಎಸ್ ಆಸ್ಪತ್ರೆಯಲ್ಲಿ  ಮೂರನೆ ಅಲೆ ಎದುರಿಸಲು ಸೌಲಭ್ಯಗಳನ್ನ ಹೆಚ್ಚಳ ಮಾಡಲಾಗಿದ್ದು, ಈ ಕುರಿತು ಮಾತನಾಢಿದ ಸುತ್ತೂರು ಶ್ರೀಗಳು, ಜೆಎಸ್‌ಎಸ್ ಆಸ್ಪತ್ರೆಯಿಂದ ಸರ್ಕಾರಕ್ಕೆ 411 ಬೆಡ್ ನೀಡಲಾಗಿದೆ. ಸರ್ಕಾರ ಮತ್ತೆ 300 ಬೆಡ್ ಕೇಳಿದ್ದರು. ಆದ್ರೆ ಅದಕ್ಕೆ ಬೇಕಾದ ಆಕ್ಸಿಜನ್ ಇಲ್ಲದ ಕಾರಣ ಬೆಡ್ ನೀಡಿಲ್ಲ. ಆಕ್ಸಿಜನ್ ಬಂದ ತಕ್ಷಣ ಬೆಡ್ ನೀಡುತ್ತೇವೆ ಎಂದು ತಿಳಿಸಿದರು.second dose -vaccine –suttur sri-  Increase- facility -JSS Hospital

ಹಾಗೆಯೇ 5000kl ಯೂನಿಟ್ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ಖರೀದಿ ಮಾಡ್ತಿದ್ದೀವಿ. ನಿಮಿಷಕ್ಕೆ 500ಲೀ ಆಕ್ಸಿಜನ್ ಉತ್ಪಾದಿಸುವ ಜನರೇಟರ್ ಸಹ ಖರೀದಿಗೆ ಸಿದ್ದತೆ ನಡೆದಿದೆ. ಇಷ್ಟು ಆಕ್ಸಿಜನ್ ಸಿಕ್ಕಿದ್ದರೆ ಇನ್ನು 500-600 ಬೆಡ್ ಹೆಚ್ಚಳವಾಗಲಿದೆ. ಮೂರನೆ ಅಲೆ ಬಂದರೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಅಂತ ಈ ಸಿದ್ದತೆ ಮಾಡಿಕೊಳ್ತಿದ್ದೇವೆ. ಸೌಲಭ್ಯ ಹೆಚ್ಚಿಸಿ ಚಿಕಿತ್ಸೆ ನೀಡಬಹುದು ಆದ್ರೆ 100% ಆರೋಗ್ಯ ನೀಡಲು ಸಾಧ್ಯವಿಲ್ಲ. ಜನರು ತಮ್ಮ ಎಚ್ಚರಿಕೆಯಿಂದ ಇದ್ದು ಕೊರೊನಾದಿಂದ ಪಾರಾಗಿ.ಸರ್ಕಾರಕ್ಕೆ ಆಸ್ಪತ್ರೆಯಿಂದ ನೀಡಬಹುದಾದ ಎಲ್ಲ ಸಹಕಾರ ನೀಡುತ್ತೇವೆ ಎಂದು ಸುತ್ತೂರು ಶ್ರೀಗಳು ಹೇಳಿದರು.

Key words: second dose -vaccine –suttur sri-  Increase- facility -JSS Hospital