Tuesday, August 25, 2026

BDA Apartments

Home Front Page ವಿಜ್ಞಾನಿ ನಾಪತ್ತೆ ವಿಷಯ ಸುಖಾಂತ್ಯ : ವಿಜಯವಾಡದಲ್ಲಿ ಪತ್ತೆಯಾದ ವಿಜ್ಞಾನಿ

ವಿಜ್ಞಾನಿ ನಾಪತ್ತೆ ವಿಷಯ ಸುಖಾಂತ್ಯ : ವಿಜಯವಾಡದಲ್ಲಿ ಪತ್ತೆಯಾದ ವಿಜ್ಞಾನಿ

ಮೈಸೂರು,ಅಕ್ಟೋಬರ್,12,2020(www.justkannada.in) : ನಾಪತ್ತೆಯಾಗಿದ್ದ ಬಾಬಾ ಆಟೋಮಿಕ್ ರೀಸರ್ಚ್ ಸೆಂಟರ್ ನ ಸೈಂಟಿಫಿಕ್ ಆಫೀಸರ್ ಅಭಿಷೇಕ್ ರೆಡ್ಡಿ ಗುಲ್ಲಾ ನಾಪತ್ತೆ ಪ್ರಕರಣ ಮಹತ್ವ ತಿರುವು ಪಡೆದುಕೊಂಡಿದ್ದು, ವಿಜಯವಾಡದಲ್ಲಿ ವಿಜ್ಞಾನಿ ಪತ್ತೆಯಾಗಿದ್ದಾರೆ.jk-logo-justkannada-logoವಿಜಯವಾಡದ ಸಂಬಂಧಿಕರ ಮನೆಯಲ್ಲಿ ಇರುವುದಾಗಿ ವಿಜ್ಞಾನಿ ಅಭಿಷೇಕ್ ರೆಡ್ಡಿ  ಗಲ್ಲಾ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಹೆಚ್ಚಿನ ಮಾಹಿತಿ ಅವರು ಬಂದ ನಂತರವೇ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಭಿಷೇಕ್ ರೆಡ್ಡಿ ಗುಲ್ಲಾ ಇಲವಾಲದ ನ್ಯೂ ಜನತಾ ಕಾಲೋನಿಯ ತಮ್ಮ ಮನೆಯಿಂದ ಅ,6ರಂದು ತಮ್ಮ ಸ್ಕೂಟರ್ ನಲ್ಲಿ ಹೊರ ಹೋದವರು ನಾಪತ್ತೆಯಾಗಿದ್ದು, ಇದುವರೆಗೆ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಸೆಂಟರ್ ಆಡಳಿತಾಧಿಖಾರಿ ಟಿ.ಕೆ.ಬೋಸ್ ಇಲವಾಲ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು.

Scientist-Lost-Topic-End-scientist-discovered - Vijayawada

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಿಂದ ಮೈಸೂರಿಗೆ ಬಂದಿದ್ದರು. ಒಂದೆರಡು ತಿಂಗಳ ಹಿಂದೆ ಹೆತ್ತವರ ಮರಣದ ನಂತರ ರೆಡ್ಡಿ ಒಬ್ಬಂಟಿಯಾಗಿದ್ದರು. ಖಿನ್ನತೆ ಮತ್ತು ಮೈಗ್ರೇನ್ ನಿಂದ ಬಳಲುತ್ತಿದ್ದರು ಎಂದೂ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ.

key words : Scientist-Lost-Topic-End-scientist-discovered – Vijayawada