ಶಾಲೆ ಆರಂಭ ವಿಚಾರ: ಸರ್ಕಾರಕ್ಕೆ  ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಸಲಹೆ ಏನು ಗೊತ್ತೆ…?

ಮೈಸೂರು,ಡಿಸೆಂಬರ್,18,2020(www.justkannada.in): ರಾಜ್ಯದಲ್ಲಿ ಶಾಲೆ ಆರಂಭಕ್ಕೆ ತಜ್ಞರ ತಂಡ ಗ್ರೀನ್ ಸಿಗ್ನಲ್  ನೀಡಿದ್ದು ಜನವರಿಯಿಂದ ಶಾಲೆ ಆರಂಭಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಶಾಲೆ ಆರಂಭ ಕುರಿತು ಸರ್ಕಾರಕ್ಕೆ ಕೆಲ ಸಲಹೆಗಳನ್ನ ನೀಡಿದ್ದಾರೆ.Teachers,solve,problems,Government,bound,Minister,R.Ashok

ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕೊರೋನಾ ಕಡಿಮೆ ಆದರೆ ಶಾಲಾ ಕಾಲೇಜು ಆರಂಭ ಮಾಡಲಿ. ಆದರೆ ಕೊರೊನಾ ಹೆಚ್ಚಾದರೆ ಶಾಲಾ ಕಾಲೇಜು ಬೇಡ. ಕೊರೋನಾ ಎರಡನೇ ಅಲೆ ಶುರುವಾಗುವ ಆತಂಕ ಇದೆ. ನೋಡಿಕೊಂಡು ಸರಿಯಾದ ಕ್ರಮ ಕೈಗೊಳ್ಳಲಿ ಮಾಸ್ಕ್ ಹಾಕಿಕೊಂಡು, ಸೋಶಿಯಲ್ ಡಿಸ್ಟೆನ್ಸ್ ಕಾಪಾಡಬೇಕು. ಸರ್ಕಾರಿ ಶಾಲೆಯಾದರು ಸರಿ, ಅಲ್ಲಿ ನಿಯಮ ಪಾಲಿಸಬೇಕು. ಆಗಿದ್ದರೆ ಮಾತ್ರ ಶಾಲೆ ತೆರೆಯಲಿ ಎಂದು ತಿಳಿಸಿದ್ದಾರೆ.

ಇನ್ನು ಪಠ್ಯಕ್ರಮ ಕಡಿತ ಮಾಡಿರೋದು ಸರ್ಕಾರಕ್ಕೆ ಬಿಟ್ಟಿದ್ದು. ಸಮಯ ಕಡಿಮೆ ಇರುವ ಕಾರಣ ಹಾಗೆ ನಿರ್ಧಾರ ಮಾಡಿರಬೇಕು. ಆದರೆ ಮಕ್ಕಳಿಗೆ ಅನುಕೂಲವಾಗುವ ನಿರ್ಣಯ ಕೈಗೊಳ್ಳಲಿ ಎಂದು ಸಿದ್ಧರಾಮಯ್ಯ ಸಲಹೆ ನೀಡಿದ್ದಾರೆ.

Key words: School Start – Issue-Former CM –Siddaramaiah- advice – government