Monday, September 21, 2026

BDA Apartments

ರಾಜ್ಯದಲ್ಲಿ ಶಾಲೆ ಆರಂಭ: ಶಾಸಕರು, ಸಚಿವರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ...
Home Front Page ರಾಜ್ಯದಲ್ಲಿ ಶಾಲೆ ಆರಂಭ: ಶಾಸಕರು, ಸಚಿವರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಸರಕಾರ

ರಾಜ್ಯದಲ್ಲಿ ಶಾಲೆ ಆರಂಭ: ಶಾಸಕರು, ಸಚಿವರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಸರಕಾರ

ಬೆಂಗಳೂರು, ಸೆಪ್ಟೆಂಬರ್ 28, 2020 (www.justkannada.in): ರಾಜ್ಯದಲ್ಲಿ ಶಾಲೆ ಆರಂಭ ಸಂಬಂಧ ಅಭಿಪ್ರಾಯ ಸಂಗ್ರಹಕ್ಕೆ ರಾಜ್ಯ ಸರಕಾರ ಮುಂದಾಗಿದೆ.

ಸಚಿವರು ಮತ್ತು ವಿಧಾನಸಭಾ ಸದಸ್ಯರಿಂದ ಅಭಿಪ್ರಾಯ ಸಂಗ್ರಹ ಮಾಡಲು ರಾಜ್ಯ ಸರ್ಕಾರ ಕ್ರಮ ವಹಿಸಿದೆ. ಈ ಕುರಿತು ಅಭಿಪ್ರಾಯ, ಸಲಹೆ, ಸೂಚನೆ ನೀಡುವಂತೆ ಸರಕಾರ ಪತ್ರ ಬರೆದಿದೆ.

ಶಾಲೆ ಆರಂಭದ ಬಗ್ಗೆ ಏನೆಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಮಾಹಿತಿ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಎಲ್ಲರೂ ನೀಡುವ ಸಲಹೆ ಸೂಚನೆಗಳು ಶೈಕ್ಷಣಿಕವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.