ಬೆಂಗಳೂರು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮಕ್ಕಳಿಗೆ ಸೋಂಕು ಹೆಚ್ಚಾದ್ರೆ ಮಾತ್ರ ಶಾಲೆ ಬಂದ್ –ಶಿಕ್ಷಣ ಸಚಿವ ಬಿ.ಸಿ ನಾಗೇಶ್.

ಬೆಂಗಳೂರು,ಜನವರಿ,21,2022(www.justkannada.in): ಬೆಂಗಳೂರಿನಲ್ಲಿ ಜನವರಿ 29ರವರೆಗೂ ಶಾಲೆ ಬಂದ್ ಆಗಲಿವೆ. ಉಳಿದ ಕಡೆಗಳಲ್ಲಿ   ಮಕ್ಕಳಿಗೆ ಸೋಂಕು ಹೆಚ್ಚಾದರೇ ಮಾತ್ರ ಶಾಲೆಗಳನ್ನ ಬಂದ್ ಮಾಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಬೊಮ್ಮಾಯಿ  ನೇತೃತ್ವದಲ್ಲಿ ನಡೆದ ಕೊರೋನಾ ನಿರ್ವಹಣೆಯ ಮಹತ್ವದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಬಿಸಿ ನಾಗೇಶ್, ಬೆಂಗಳೂರಿನಲ್ಲಿ ಜ.29ರವರೆಗೂ ಶಾಲೆ ಬಂದ್ ಆಗಲಿದೆ. ಜನವರಿ 29 ರಂದು ಸಭೆ ನಡೆಸಿ ಶಾಲೆ ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಉಳಿದ ಕಡೆ ಶಾಲೆ ಇರುತ್ತೆ. ಮಕ್ಕಳಿಗೆ ಸೋಂಕು ಹೆಚ್ಚಾದರೆ ಮಾತ್ರ ಶಾಲೆ ಬಂದ್ ಮಾಡಲಾಗುತ್ತದೆ. 

ಕಡಿಮೆ ಮಕ್ಕಳಿಗೆ ಸೋಂಕು ಬಂದ್ರೆ 3 ದಿನ ಹೆಚ್ಚು ಮಕ್ಕಳಿಗೆ ಸೋಂಕು ಬಂದ್ರೆ 7 ದಿನ ಶಾಲೆ ಬಂದ್ ಮಾಡಲಾಗುತ್ತದೆ.  ಶಾಲೆ ಬಂದ್ ಬಗ್ಗೆ ಸ್ಥಳೀಯ ಅಧಿಕಾರಿಗಳು ನಿರ್ಧರಿಸುತ್ತಾರೆ.   5 ಲಕ್ಷಕ್ಕಿಂತ ಹೆಚ್ಚು ಮಕ್ಕಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಈ ಪೈಕಿ ಶೇ. 5ರಷ್ಟು ಮಕ್ಕಳಿಗೆ ಸೋಂಕು ತಗುಲಿದೆ ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದರು.

Key words: school –bandh-minister – BC Nagesh.