ಹೆಲಿ ಟೂರಿಸಂ ವಿಚಾರ: ‘ಸೇವ್ ಮೈಸೂರು ಕ್ಯಾಂಪೈನ್’‌ ಗೆ ನಟ ದುನಿಯಾ ವಿಜಯ್ ಸಾಥ್  

ಮೈಸೂರು,ಏಪ್ರಿಲ್,15,2021(www.justkannada.in) : ಮೈಸೂರಿನಲ್ಲಿ ಮರಕಡಿದು ಹೆಲಿಟೂರಿಸಂ ವಿಚಾರ ಸಂಬಂಧಿಸಿದಂತೆ ಸೇವ್ ಮೈಸೂರು ಕ್ಯಾಂಪೈನ್‌ಗೆ ಸಲಗ ಟೀಂ ಸಾಥ್ ನೀಡಿದ್ದು, ಯೋಜನೆ ಪರಾಮರ್ಶೆ ಮಾಡುವಂತೆ ಸರ್ಕಾರಕ್ಕೆ ನಟ ದುನಿಯಾ ವಿಜಯ್ ಸಲಹೆ ನೀಡಿದ್ದಾರೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappaನಾವುಗಳು ಮರ ಬೆಳೆಸೋಕೆ ಆಗದಿದ್ದರೂ ಮರ ಕತ್ತರಿಸಲು ಮುಂದಾಗಬಾರದು

ಸೇವ್ ಮೈಸೂರು ಕ್ಯಾಂಪೈನ್‌ ಗೆ ಬೆಂಬಲಿಸಿ ನಟ ದುನಿಯಾ ವಿಜಯ್ ಫೇಸ್‌ಬುಕ್ ‌ನಲ್ಲಿ ಪೋಸ್ಟ್ ಮಾಡಿದ್ದು, ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡೋ ಸಲುವಾಗಿ ಲಲಿತಮಹಾಲ್ ಹೋಟೆಲ್ ಮುಂಭಾಗದ ಮರಗಳನ್ನ ಕಡಿಯೋ ವಿಚಾರ ಗಮನಕ್ಕೆ ಬಂತು. ನಾವುಗಳು ಮರ ಬೆಳೆಸೋಕೆ ಆಗದಿದ್ದರೂ ಮರ ಕತ್ತರಿಸಲು ಮುಂದಾಗಬಾರದು ಎಂದಿದ್ದಾರೆ.

Save-Mysore-Campaign-Actor-Dunia Vijay-Support

ಮರ ಕಡಿಯೋದನ್ನ ಬಿಟ್ಟು ಪರ್ಯಾಯವಾಗಿ ಹೆಲಿ ಟೂರಿಸಂ ಮಾಡೋ ಪ್ಲಾನ್ ಮಾಡಿ

ಆ ಜಾಗದಲ್ಲಿ ಮರಗಳು ಇರೋದಕ್ಕೆ ಆ ಜಾಗ ಅಷ್ಟು ಸುಂದರವಾಗಿ ಕಾಣುತ್ತಿದೆ. ಶೂಟಿಂಗ್ ಟೈಂ ಅಲ್ಲಿ ಸಾಕಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದಾಗ ಖುಷಿ ಆಗುತ್ತೆ. ಹೀಗಾಗಿ, ಈ ಯೋಜನೆಯನ್ನ ಮತ್ತೊಮ್ಮೆ ಪರಾಮರ್ಶೆ ಮಾಡಿ, ಮರ ಕಡಿಯೋದನ್ನ ಬಿಟ್ಟು ಪರ್ಯಾಯವಾಗಿ ಹೆಲಿ ಟೂರಿಸಂ ಮಾಡೋ ಪ್ಲಾನ್ ಮಾಡಿ ಎಂದು ವಿನಂತಿಸಿದ್ದಾರೆ.Save-Mysore-Campaign-Actor-Dunia Vijay-Support

ಮರ ಕಡಿದು ಪರಿಸರ ಹಾಳು ಮಾಡಿ ಹೆಲಿ ಟೂರಿಸಂ ಮಾಡುವುದಕ್ಕೆ ವಿರೋಧ 

ಸರ್ಕಾರದ ಅಭಿವೃದ್ಧಿ ಯೋಜನೆಗೆ ನಮ್ಮ ಬೆಂಬಲ ಹೇಗಿರುವುದೋ, ಮರ ಕಡಿದು ಪರಿಸರ ಹಾಳು ಮಾಡಿ ಹೆಲಿ ಟೂರಿಸಂ ಮಾಡುವುದಕ್ಕೂ ಅಷ್ಟೆ ವಿರೋಧ ಇರುತ್ತೆ. ಸೇವ್ ಮೈಸೂರು ಕ್ಯಾಂಪೈನ್‌ ಗೆ ನನ್ನ ಬೆಂಬಲ ಇದೆ. ಸರ್ಕಾರ ಮತ್ತೆ ಯೋಚನೆ ಮಾಡಿ ಯೋಜನೆ ಕೈಗೆತ್ತಿಕೊಳ್ಳಲಿ ಎಂದು ತಿಳಿಸಿದ್ದಾರೆ.

key words : Save-Mysore-Campaign-Actor-Dunia Vijay-Support