ತಮ್ಮನ್ನ ಭಾರತೀಯ ಸಂಸ್ಕೃತಿಯ ವಿರೋಧಿ ಎಂದು ಕರೆದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗೆ ಸತೀಶ್ ಜಾರಕಿಹೊಳಿ ತಿರುಗೇಟು…

ಬೆಳಗಾವಿ,ಏಪ್ರಿಲ್,11,2021(www.justkannada.in):  ಸತೀಶ್ ಜಾರಕಿಹೊಳಿ ಭಾರತೀಯ ಸಂಸ್ಕೃತಿಯ ವಿರೋಧಿ ಎಂದು ಹೇಳಿಕೆ ನೀಡಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗೆ ಬೆಳಗಾವಿ ಲೋಕಸಭಾ ಉಪಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸತೀಶ್ ಜಾರಕಿಹೊಳಿ, ಅರುಣ್ ಸಿಂಗ್ ಗೆ ಭಾರತೀಯ ಇತಿಹಾಸದ ಬಗ್ಗೆ ಗೊತ್ತಿಲ್ಲ.  ಮೌಢ್ಯದ ವಿರುದ್ದ 6ನೇ ಶತಮಾನದಿಂದಲೂ ಹೋರಾಟ ನಡೆಯುತ್ತಿದೆ. ಅರುಣ್ ಸಿಂಗ್ ಕೇಳಬೇಕಾದರೇ ಮೊದಲು ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಬಸವಣ್ಣ ಅವರನ್ನ ಕೇಳಬೇಕು ಎಂದು ತಿರುಗೇಟು ನೀಡಿದರು.Satish jarkiholi- anti-Indian culture-statment- BJP -in charge - Arun Singh

ಹಾಗೆಯೇ ಜನ ಹಾಳಾಗಬಾರದೆಂದು ಕಾರ್ಯಕ್ರಮ ಮಾಡಿದ್ದೀನಿ. ಯಾವುದೇ ಧರ್ಮ, ಜಾತಿಯ ವಿರುದ್ಧ ಅಲ್ಲ ಎಂದು ಸತೀಶ್ ಜಾರಿಕಿಹೊಳಿ ತಿಳಿಸಿದರು.

Key words: Satish jarkiholi- anti-Indian culture-statment- BJP -in charge – Arun Singh