ಸರಗೂರು: ಹಾಸ್ಟೆಲ್’ಗೆ ಬೀಗ ಹಾಕಿ ಮನೆಗೆ ಹೋದ ವಾರ್ಡನ್! ಚಳಿಯಲ್ಲಿ ನಡುಗುತ್ತಿದ್ದ ಮಕ್ಕಳಿಗೆ ನೆರವಾದ ಸ್ಥಳೀಯರು

ಮೈಸೂರು, ನವೆಂಬರ್ 06, 2022 (www.justkannada.in): ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.

ಹಾಸ್ಟೆಲ್ ಗೆ  ಬೀಗ ಹಾಕಿಕೊಂಡು  ವಾರ್ಡನ್ ಮನೆಗೆ ಹೋದ ಪರಿಣಾಮ ಮಕ್ಕಳು ಚಳಿಯಲ್ಲೇ ಹಾಸ್ಟೆಲ್ ಮುಂಭಾಗ ಕುಳಿತ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ವೇಳೆ ಚಳಿಯಲ್ಲಿ ನಡುಗುವ ಮಕ್ಕಳಿಗೆ ಸ್ಥಳೀಯರು ನೆರವಾಗಿದ್ದಾರೆ.

ತಾಲ್ಲೂಕು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿಈ ಘಟನೆ ನಡೆದಿದೆ. ಮಕ್ಕಳು ಆಟ ಆಡಲೆಂದು ಹೊರಹೋಗಿದ್ದವೇಳೆ ಹಾಸ್ಟೆಲ್ ವಾರ್ಡನ್ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದಾರೆ. ಶನಿವಾರ ಎಲ್ಲಾ ಮಕ್ಕಳು ಊರಿಗೆ ಹೋಗಿದ್ದಾರೆಂದು ಹಾಸ್ಟೆಲ್ ಬಾಗಿಲು ಬೀಗ ಹಾಕಿಕೊಂಡು ವಾರ್ಡನ್ ಮನೆಗೆ ಹೋಗಿದ್ದರು ಎನ್ನಲಾಗಿದೆ.

ಮಕ್ಕಳ ರಾತ್ರಿ ಊಟಕ್ಕೆ ಸ್ಥಳೀಯರು ನೆರವಾಗಿದ್ದಾರೆ. ಬನ್, ಬಿಸ್ಕತ್ ನೀಡಿ ಊಟದ ವ್ಯವಸ್ಥೆಯನ್ನೂ ಸ್ಥಳೀಯರು ಮಾಡಿದ್ದಾರೆ. ನೆನ್ನೆ ಮಧ್ಯಾಹ್ನದ ವೇಳೆ ಆಟ ಆಡಲು ತೆರಳಿದ್ದ ಮಕ್ಕಳು. ಈ ವೇಳೆ ಹಾಸ್ಟೆಲ್ ಗೆ ಬೀಗ ಹಾಕಿಕೊಂಡು ವಾರ್ಡನ್ ಹೊರಟಿದ್ದರು ಎನ್ನಲಾಗಿದೆ.

ಮಕ್ಕಳು ಯಾರು ಇಲ್ಲ ಎಂದು ತಿಳಿದು ಬೇಜವಾಬ್ದಾರಿಯಿಂದ ವಾರ್ಡನ್ ವರ್ತಿಸಿದ್ದಾರೆ. ರಾತ್ರಿ 11ಗಂಟೆಯವರೆಗೂ ಚಳಿಯಲ್ಲಿಯೇ ವಿದ್ಯಾರ್ಥಿಗಳು ಹೊರಗೆ ಕುಳಿತಿದ್ದಾರೆ. ಇದು ಸಮೀಪದ ಬೆಟ್ಟದ ಪಕ್ಕದಲ್ಲೇ ಇದ್ದು, ಕಾಡು ಪ್ರಾಣಿಗಳ ಭಯದಲ್ಲಿದ್ದ ಮಕ್ಕಳ ನೆರವಿಗೆ ಸ್ಥಳೀಯರು ಧಾವಿಸಿದ್ದಾರೆ. ರಾತ್ರಿ 11ಗಂಟೆಯಲ್ಲಿ ಹಾಸ್ಟೆಲ್ ಬೀಗವನ್ನು ಸ್ಥಳೀಯರು ತೆಗೆಸಿದ್ದಾರೆ. ಹಾಸ್ಟೆಲ್ ಅವ್ಯವಸ್ಥೆ ಹಾಗೂ ವಾರ್ಡನ್ ನಡೆಗೆ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.