ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆ: ಸಭೆ ನಡೆಸಿ ಚರ್ಚಿಸಿದ ಸಚಿವ ಸಂತೋಷ್ ಲಾಡ್

ಬೆಂಗಳೂರು,ಸೆಪ್ಟಂಬರ್,4,2025 (www.justkannada.in): ಧಾರವಾಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೌಶಲ್ಯ ತರಬೇತಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ವಿದ್ಯುತ್ ವಲಯ ಮತ್ತು ಆಟೋಮೇಶನ್ ವಲಯಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಭೆ ನಡೆಸಿ ಚರ್ಚಿಸಿದರು.

ಇಂದು ವಿಕಾಸ ಸೌಧದ ಕೊcಠಡಿ ಸಂಖ್ಯೆ 122 ರಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ  ಕಾರ್ಮಿಕ ಸಚಿವ ಸಂತೋಷ್ ಲಾಡ್  ಅವರು ಪ್ರತಿನಿಧಿಗಳು ಮತ್ತು ಕನ್ಸೋರ್ಟಿಯಂ ಪ್ರಮುಖ ರೊಂದಿಗೆ ಸಮಲೋಚನೆ ನಡೆಸಿದರು.

ಈ ಸಭೆಯಲ್ಲಿ   ಸಂಸದ ಈ.ತುಕಾರಾಂ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಭಾರತಿ, ಜಂಟಿ ಕಾರ್ಯದರ್ಶಿ ಮತ್ತು ಜಂಟಿ ಕಾರ್ಮಿಕ ಆಯುಕ್ತರಾದ ಉಮೇಶ್, ಚಿದಾನಂದ, ಜಂಟಿ ಕಾರ್ಮಿಕ ಆಯುಕ್ತರು ಮತ್ತು ವಿಶೇಷಾಧಿಕಾರಿ, ಶಶಿಧರ್, ಕನ್ಸಲ್ಟೆಂಟ್ ಮುಖ್ಯಸ್ಥರು ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅವರಿಗೆ ಕೌಶಲ್ಯ ತರಬೇತಿ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದರು.

Key words: skill training institute, Minister, Santosh Lad holds, meeting