“ಸಂಸ್ಕೃತ ವಿವಿಯ 8ನೇ ಘಟಿಕೋತ್ಸವ, 30 ಮಂದಿಗೆ ಪಿಎಚ್.ಡಿ, 43 ಪದವೀಧರರಿಗೆ ಎಂ.ಫಿಲ್‌ ಪ್ರದಾನ”

ಬೆಂಗಳೂರು,ಏಪ್ರಿಲ್,10,2021(www.justkannada.in) : ನಾಡಿನ ಹಿರಿಯ ಸಂಸ್ಕೃತ ವಿದ್ವಾಂಸ ಪಂ.ಮಳಗಿ ಜಯತೀರ್ಥಾ ಚಾರ್ಯ ಅವರಿಗೆ ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ʼಗೌರವ ಡಿಲಿಟ್‌ʼ ಪದವಿ ಪ್ರದಾನ ಮಾಡಿದರು.Sanskrit Vivia,8th event,30 people,Ph.D,43graduates,M.Phil,Awarded 

ಬೆಂಗಳೂರಿನ ಗಾಯನ ಸಮಾಜದಲ್ಲಿ ಶನಿವಾರ ನಡೆದ ಸಂಸ್ಕೃತ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅರ್ಹ ಪದವೀಧರರಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಿದ ಅವರು; ಪದವಿಗಳನ್ನು ಸ್ವೀಕರಿಸಿದ ಎಲ್ಲರಿಗೂ ಶುಭ ಹಾರೈಸಿದರು.

ಪಂ.ಮಳಗಿ ಜಯತೀರ್ಥಾ ಚಾರ್ಯ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದು, ಮಾತುಂಗಾದ ಮಾವುಲಿ ವಿದ್ಯಾಪೀಠದಲ್ಲಿ ಶಾಸ್ತ್ರಗಳನ್ನೂ ಅಧ್ಯಯನ ಮಾಡಿದ್ದರು. ಅವರ ಸಾಧನೆಯ ಬಗ್ಗೆ ಉಪ ಮುಖ್ಯಮಂತ್ರಿಗಳು ಹರ್ಷ ವ್ಯಕ್ತಪಡಿಸಿದರು.

ಬಳಿಕ ಡಿಸಿಎಂ ಅವರು ಸಂಸ್ಕೃತ ಪಂಡಿತ ಎಸ್.ಕಣ್ಣನ್ ಅವರಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಿದರು. 30 ಮಂದಿಗೆ ಪಿಎಚ್ ಡಿ ಪದವಿಯನ್ನು ಹಾಗೂ 43 ಮಂದಿಗೆ ಎಂ.ಫಿಲ್‌ ಪದವಿಯನ್ನು ನೀಡಲಾಯಿತು.

ಪಶ್ಚಿಮ ಬಂಗಾಳ ಬೇಲೂರಿನ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸ್ವಾಮಿ ಅತ್ಮಪ್ರಿಯಾನಂದ ಅವರು ಕೊಲ್ಕತಾದಿಂದಲೇ ವರ್ಚುಯಲ್‌ ವೇದಿಕೆ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು. ಕೋವಿಡ್‌ ಕಾರಣಕ್ಕೆ ಅವರು ಅಲ್ಲಿಂದಲೇ ಮಾತನಾಡಬೇಕಾಯಿತು.

ಸಂಸ್ಕೃತ ವಿವಿ ಕುಲಪತಿ ಪ್ರೊ.ಕಾ.ಇ.ದೇವನಾಥನ್‌ ಘಟಿಕೋತ್ಸವದಲ್ಲಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.Sanskrit Vivia-8th event-30 people-Ph.D-43graduates-M.Phil-Awarded 

ವಿವಿಯ ರಿಜಿಸ್ಟ್ರಾರ್‌ ಎಂ.ಕೊಟ್ರೇಶ್‌ ಹಾಗೂ ಉನ್ನತ ಅಧಿಕಾರಿಗಳು, ಪ್ರೊಫೆಸರ್‌ಗಳು, ಸಿಬ್ಬಂದಿ, ವಿಶೇಷ ಆಹ್ವಾನಿತರು ಘಟಿಕೋತ್ಸವಕ್ಕೆ ಸಾಕ್ಷಿಯಾದರು.

key words : Sanskrit Vivia-8th event-30 people-Ph.D-43graduates-M.Phil-Awarded