ಮಹೇಶ್ ಬಾಬು ಚಿತ್ರಕ್ಕೆ ಪೂಜಾ ಹೆಗ್ಡೆ ಬದಲಿಗೆ ಸಮಂತಾ ನಾಯಕಿ!

ಬೆಂಗಳೂರು, ಡಿಸೆಂಬರ್ 31, 2021 (www.justkannada.in): ಮಹೇಶ್​ ಬಾಬು ಮುಂದಿನ ಚಿತ್ರಕ್ಕೆ ಸಮಂತಾ ನಾಯಕಿ ಎನ್ನುವ ಸುದ್ದಿ ಹೊರಬಿದ್ದಿದೆ.

ಸಮಂತಾ ಜ್ಯೂ. ಎನ್​ಟಿಆರ್​ ಜತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಇತ್ತೀಚಿಗಷ್ಟೇ ಹರಿದಾಡಿತ್ತು. ಇದರ ಬಳಿಕ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಅವರ ಬಗ್ಗೆ ಮತ್ತೊಂದು ಹೊಸ ಸುದ್ದಿ ಹೊರಬಿದ್ದಿದೆ.

ಮಹೇಶ್​ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ ಅವರು ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ‘ಸರ್ಕಾರಿ ವಾರಿ ಪಾಟ’ ಚಿತ್ರ ತೆರೆಗೆ ಬಂದ ನಂತರದಲ್ಲಿ ಹೊಸ ಸಿನಿಮಾದ ಕೆಲಸ ಆರಂಭಗೊಳ್ಳಲಿದೆ.

ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಸಮಯದ ಕೊರತೆಯಿಂದ ಆ ಅವಕಾಶ ಸಮಂತಾ ಪಾಲಾಗಿದೆ.