ಬೆಳ್ಳಿತೆರೆ ಮೇಲೆ ಪಿವಿ ಸಿಂಧು ಆಗಲಿದ್ದಾರೆ ಸಮಂತಾ ಅಕ್ಕಿನೇನಿ

ಬೆಂಗಳೂರು, ಸೆಪ್ಟೆಂಬರ್ 04, 2019 (www.justkannada.in): ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಬಯೋಪಿಕ್ ನ್ನು ಬೆಳ್ಳಿಪರದೆ ತರುವ ಸಿದ್ಧತೆಗಳು ನಡೆಯುತ್ತಿವೆ.

ಸಿಂಧು ಕೋಚ್ ಪುಲ್ಲೇಲ ಗೋಪಿಚಂದ್ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇದೀಗ ಪಿವಿ ಸಿಂಧು ಪಾತ್ರದಲ್ಲಿ ಸಮಂತಾ ಅಕ್ಕಿನೇನಿ ಕಾಣಿಸಿಕೊಳ್ಳಲಿದ್ದಾರೆ.

ಈ ಪಾತ್ರಕ್ಕೆ ಸಂಪೂರ್ಣವಾಗಿ ಸಮಂತಾ ಒಪ್ಪುತ್ತಾರೆ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಜತೆಗೆ ದೀಪಿಕಾ ಹೆಸರೂ ಕೂಡ ಈ ಪಾತ್ರಕ್ಕೆ ಕೇಳಿ ಬರುತ್ತಿದೆ.