ಸಲ್ಮಾನ್ ಖಾನ್ ನ್ಯೂ ಲುಕ್, ಕಟ್ಟುಮಸ್ತಾದ ಬಾಡಿಗೆ ಅಭಿಮಾನಿಗಳು ಫುಲ್ ಫಿದಾ

ಮುಂಬೈ:ಜೂ-22:(www.justkannada.in) ಭಾರತ್ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿರುವ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್, ಸಧ್ಯ ಜಿಮ್ ನಲ್ಲಿ ಕಠಿಣ ವರ್ಕೌಟ್ ಮಾಡಿ, ಬೆವರಿಳಿಸುತ್ತಿದ್ದಾರೆ. ಹೀಗೆ ಬೆವರಿಳಿಸಿದ ಕಟ್ಟುಮಸ್ತಾದ ತಮ್ಮ ದೇಹದ ಫೋಟೋ ಒಂದನ್ನು ಸಲ್ಮಾನ್, ಇನ್ ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದ್ದು, ಸಲ್ಮಾನ್ ಹೊಸ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಸಲ್ಮಾನ್‌ ಖಾನ್‌, ತಮ್ಮ ಲೇಟೆಸ್ಟ್‌ ಶರ್ಟ್‌ಲೆಸ್‌ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿಯನ್ನೇ ಮೂಡಿಸಿದ್ದಾರೆ. ಕಠಿಣ ವರ್ಕೌಟ್‌ ಮೂಲಕ ಚೆನ್ನಾಗಿ ಹುರಿಗೊಳಿಸಿರುವ ತಮ್ಮ ಕಟ್ಟುಮಸ್ತಾದ ದೇಹವನ್ನು ಅಪ್ ಲೋಡ್ ಮಾಡಿರುವ ಸಲ್ಮಾನ್, ನನ್ನ ಹಿಂದಿರುವ ವಯರ್‌ ಯಾವುದರದ್ದು? ನೀವು ಗೆಸ್‌ ಮಾಡಿ ಪ್ಲೀಸ್‌ ಎಂದು ಬರೆದಿದ್ದಾರೆ.

53 ವರ್ಷದ ಸಲ್ಮಾನ್ ರ ಫಿಟ್ ನೆಸ್ ಬಾಡಿಗೆ ಅಭಿಮಾನಿಗಳು ಪುಲ್ ಫಿದಾ ಆಗಿದ್ದು, ಸಲ್ಮಾನ್ ಫೋಟೋಗೆ 10 ಲಕ್ಷಕ್ಕೂ ಅಧಿಕ ಲೈಕ್ ಗಳು ಬಂದಿವೆ. ಜತೆಗೆ ಸಲ್ಮಾನ್ ಪ್ರಶ್ನೆಗೆ ಉತ್ತರುಸಿರುವ ಹಲವರು ನೀವು ನಮಗೆ ಎಲೆಕ್ಟ್ರಿಕ್‌ ಶಾಕ್‌ ಅನ್ನೇ ಕೊಟ್ಟಿರುವಾಗ ಆ ವಯರ್‌ ಯಾರು ನೋಡ್ತಾರೆ ಎಂದೂ, ನಿಮ್ಮ ಈ ದೇಹದ ಮುಂದೆ ಆ ವಯರ್‌ ಕಾಣ್ತಾನೆ ಇಲ್ಲ ಭಾಯ್‌ ಎಂದು ಹೇಳುವ ಮೂಲಕ ಕಾಮೆಂಟ್‌ ಗಳ ಸುರಿಮಳೆಯನ್ನೇ ಮಾಡಿದ್ದಾರೆ.

ಸಲ್ಮಾನ್ ಖಾನ್ ನ್ಯೂ ಲುಕ್, ಕಟ್ಟುಮಸ್ತಾದ ಬಾಡಿಗೆ ಅಭಿಮಾನಿಗಳು ಫುಲ್ ಫಿದಾ
Salman Khan New Shirtless Picture Goes Viral