ಸೈಯಕ್ ಇಸಾಕ್ ಅವರಿಗೆ ರಾಮಾಯಣ, ಮಹಾಭಾರತ, ಕುರಾನ್ ಹಾಗೂ ಬೈಬಲ್ ಪುಸ್ತಕ ಹಾಗೂ ಆರ್ಥಿಕ ನೆರವು ನೀಡಿದ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಏಪ್ರಿಲ್.14,2021(www.justkannada.in): ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ವೈಯಕ್ತಿಕವಾಗಿ ರಾಜೀವ್‌ನಗರದಲ್ಲಿ ಗ್ರಂಥಾಲಯ ನಡೆಸುತ್ತಿದ್ದ ಸೈಯದ್ ಇಸಾಕ್ ಅವರಿಗೆ ಗ್ರಂಥಾಲಯ ಮರುಸ್ಥಾಪನೆಗಾಗಿ 25 ಸಾವಿರ ಧನಸಹಾಯ ಮಾಡಿದರು. ಇದಲ್ಲದೆ ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ  ಮತ್ತು ಭಾರತೀಯ ಜನತಾ ಪಕ್ಷದ ಕಚೇರಿಗೆ ರಾಮಾಯಣ, ಮಹಾಭಾರತ, ಬೈಬಲ್ ಮತ್ತು ಕುರಾನ್ ಪುಸ್ತಕಗಳನ್ನು ನೀಡಿದರು.CM,B.S.Y,Statement,atrocious,Extreme,Kodihalli Chandrasekhar

ಆರ್ಥಿಕವ ನೆರವು ಮತ್ತು ಗ್ರಂಥಗಳನ್ನು ಸ್ವೀಕರಿಸಿದ ಸೈಯದ್ ಇಸಾಕ್ ಅವರ, ಒಂದು ಗ್ರಂಥಾಲಯವು ನೂರು ದೇವಾಲಯಗಳಿಗೆ ಸಮವಾಗಿದೆ. ಮಸಿದಿ, ದೇವಾಲಯ ಹಾಗೂ ಚರ್ಚ್ ಗಳು ನಿರ್ಮಾಣವಾದರೆ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಆದರೆ ಗ್ರಂಥಾಲಯ ನಿರ್ಮಾಣವಾದರೆ ಹಲವಾರು ವಿದ್ಯಾವಂತರು ಹುಟ್ಟಿಕೊಳ್ಳುತ್ತಾರೆ ಎಂದರು.Saiyak Isaac – Ramayana-Mahabharata-Kuran - Bible -book -Minister - ST Somashekhar.

ನೂರು ಜನ‌ರ ಸ್ನೇಹ ಬೆಳೆಸಿದರೂ ಒಂದು ದಿನ ಮೋಸ ಮಾಡುತ್ತಾರೆ. ಆದರೆ ಪುಸ್ತಕಗಳು ಎಂದಿಗೂ ಯಾರಿಗೂ ಮೋಸ ಮಾಡುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ಸೇರಿದಂತೆ ಇತರರು ಹಾಜರಿದ್ದರು.

Key words: Saiyak Isaac – Ramayana-Mahabharata-Kuran – Bible -book -Minister – ST Somashekhar.