125 ಕೋಟಿ ರೂ.ಗೆ ಮೆಗಾಸ್ಟಾರ್ ‘ಸೈರಾ’ ಸ್ಯಾಟ್ ಲೈಟ್, ಡಿಜಿಟಲ್ ಹಕ್ಕು ಮಾರಾಟ

ಬೆಂಗಳೂರು, ಸೆಪ್ಟೆಂಬರ್ 18, 2019 (www.justkannada.in):

ಐದು ಭಾಷೆಗಳ ಸೈರಾ ಚಿತ್ರವನ್ನ ಅಮೇಜಾನ್ ಪ್ರೈಮ್ ಅವರು ಸುಮಾರು 40 ಕೋಟಿ ವೆಚ್ಚಕ್ಕೆ ಡಿಜಿಟಲ್ ಹಕ್ಕು ಖರೀದಿಸಿದ್ದಾರೆ ಎಂದು ಹೇಳಲಾಗಿತ್ತು. ಈಗ, ಸ್ಯಾಟ್ ಲೈಟ್ ಹಕ್ಕು ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವ ಮಾಹಿತಿ ಹೊರಬಿದ್ದಿದೆ.

ಅಕ್ಟೋಬರ್ 2 ರಂದು ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ
ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಈಗ ಭರ್ಜರಿ ಪ್ರೀ-ಕಲೆಕ್ಷನ್ ಮಾಡಿದೆ.

ಸೈರಾ ಸಿನಿಮಾ ರಿಲೀಸ್ ಗೆ ಮುನ್ನವೇ ದೊಡ್ಡ ಮೊತ್ತದ ಗಳಿಕೆ ಕಂಡಿದೆ. ಹೌದು, ಈಗಾಗಲೇ ಎಲ್ಲ ರಾಜ್ಯಗಳ ವಿತರಣೆ ಹಕ್ಕು ಸೋಲ್ಡ್ ಔಟ್ ಆಗಿದೆ.

ಸುಮಾರು 125 ಕೋಟಿ ನೀಡಿ ಜೀ ಟಿವಿ ಅವರು ಸ್ಯಾಟ್ ಲೈಟ್ ಹಾಗೂ ಡಿಜಿಟಲ್ ಹಕ್ಕು ಖರೀದಿಸಿದ್ದಾರಂತೆ. ದಕ್ಷಿಣ ಭಾರತದಲ್ಲೇ ಇದು ದಾಖಲೆ ಎನ್ನಲಾಗಿದೆ. ಈವರೆಗೂ ಯಾವ ಚಿತ್ರಕ್ಕೂ ಇಷ್ಟು ದೊಡ್ಡ ಮೊತ್ತ ಕೊಟ್ಟಿಲ್ಲ.