ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹ: ತಿ.ನರಸೀಪುರ ತಲುಪಿದ ರಾಜ್ಯಮಟ್ಟದ ಮಾದಿಗರ ಚೈತನ್ಯ ರಥಯಾತ್ರೆ….

ಮೈಸೂರು,ಫೆಬ್ರವರಿ,15,2021(www.justkannada.in): ಸದಾಶಿವ ಆಯೋಗ ವರದಿ  ಜಾರಿಗೊಳಿಸುವಂತೆ  ಆಗ್ರಹಿಸಿ ಮಾದಿಗರ ಚೈತನ್ಯ ರಥಯಾತ್ರೆ ರಾಜ್ಯಾದ್ಯಂತ ಸಂಚಾರ ನಡೆಸುತ್ತಿದ್ದು ಇಂದು ಮೈಸೂರು ಜಿಲ್ಲೆ ತಿ.ನರಸೀಪುರಕ್ಕೆ ಬಂದು ತಲುಪಿದೆ.jk

ಚೈತನ್ಯ ರಥಯಾತ್ರೆಗೆ ತಾಲ್ಲೂಕು ಬಾಬುಜಗಜೀವರಾಮ್ ಒಕ್ಕೂಟದ ಸದಸ್ಯರು ಅದ್ದೂರಿ ಸ್ವಾಗತ ನೀಡಿದರು. ಸದಾಶಿವ ಆಯೋಗ ವರದಿ ಜಾರಿ ಮಾಡುವ ಮೂಲಕ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನೀಡಬೇಕು. ಈ ವಿಚಾರವಾಗಿ ಮಾದಿಗ ಸಮುದಾಯ ಅನೇಕ ಸಮಾವೇಶ,ಪ್ರತಿಭಟನೆಗಳನ್ನು ನಡೆಸಿವೆ. ಸದಾಶಿವ ಆಯೋಗ ವರದಿ ಜಾರಿ ಮಾಡುವಲ್ಲಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್, ಮೂರು ಪಕ್ಷಗಳು ನಮ್ಮ ಸಮಾಜಕ್ಕೆ ದ್ರೋಹ ಮಾಡಿವೆ ಎಂದು ಸದಸ್ಯರು ಕಿಡಿಕಾರಿದರು.sadashiva-commission-report-implement-madigara-chaitanya-yatra-t-narasipura

ಮಾರ್ಚ್ 8ನೇ ತಾರೀಖು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಆಯೋಜನೆ ಮಾಡಲಾಗಿದೆ. ಸದಾಶಿವ ಆಯೋಗ ವರದಿ ಜಾರಿ ಮಾಡುವ ತನಕ ನಮ್ಮ ಪ್ರತಿಭಟನೆಯನ್ನ ಕೈ ಬಿಡುವುದಿಲ್ಲ. ರಾಜ್ಯ ಕೂಡಲೇ ಸದಾಶಿವ ಆಯೋಗ ವರದಿ ಜಾರಿ ಮಾಡುವಂತೆ ಒತ್ತಾಯಿಸಿದರು.

Key words: Sadashiva Commission- Report –implement-Madigara Chaitanya Yatra –T.Narasipura.